ADVERTISEMENT

ಕವಿತಾಳ | ಹದಗೆಟ್ಟ ಶಾಲೆ ರಸ್ತೆ: ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 12:45 IST
Last Updated 13 ಜೂನ್ 2024, 12:45 IST
ಕವಿತಾಳ ಸಮೀಪದ ಅಮೀನಗಡ ಸರ್ಕಾರಿ ಶಾಲೆ ಸಂಪರ್ಕಿಸುವ ರಸ್ತೆ ಮಳೆಯಿಂದ ಹಾಳಾಗಿದೆ
ಕವಿತಾಳ ಸಮೀಪದ ಅಮೀನಗಡ ಸರ್ಕಾರಿ ಶಾಲೆ ಸಂಪರ್ಕಿಸುವ ರಸ್ತೆ ಮಳೆಯಿಂದ ಹಾಳಾಗಿದೆ   

ಕವಿತಾಳ: ಸತತ ಮಳೆಯಿಂದ ಸಮೀಪದ ಅಮೀನಗಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದ ದೃಶ್ಯ ಗುರುವಾರ ಕಂಡು ಬಂತು.

ಮುಖ್ಯ ರಸ್ತೆಯಿಂದ ಶಾಲೆ ಸಂಪರ್ಕಿಸುವ ಮಣ್ಣಿನ ರಸ್ತೆಯಲ್ಲಿ ಮಳೆ ನೀರು ನಿಂತು ಹಾಳಾಗಿದೆ. ಶಾಲೆಗೆ ತೆರಳುವಾಗ ಕೆಲವು ವಿದ್ಯಾರ್ಥಿಗಳು ಕಾಲು ಜಾರಿ ಬಿದ್ದಿದ್ದಾರೆ. ಮಕ್ಕಳ ಪರದಾಟ ಗಮನಿಸಿದ ಗ್ರಾಮದ ಕೆಲವು ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಮೂರು ಟ್ರ್ಯಾಕ್ಟರ್‌ ಮರಂ ಹಾಕಿಸಿ ತಗ್ಗುಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.

’ರಸ್ತೆಗೆ ಮರಂ ಹಾಕಿಸುವಂತೆ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಹೀಗಾಗಿ ಸ್ವಂತ ಖರ್ಚಿನಲ್ಲಿ ಮರಂ ಹಾಕಿಸಿದ್ದೇವೆʼ ಎಂದು ಮಂಜೂರ್‌ ಪಾಶಾ, ಅಯ್ಯಣ್ಣ, ಹುಚ್ಚಬುಡ್ಡ ತಳವಾರ ಮತ್ತು ಆದೇಶ ತಿಳಿಸಿದರು.

ADVERTISEMENT
ಕವಿತಾಳ ಸಮೀಪದ ಅಮೀನಗಡ ಸರ್ಕಾರಿ ಶಾಲೆ ಸಂಪರ್ಕಿಸುವ ರಸ್ತೆ ಹಾಳಾಗಿದ್ದರಿಂದ ಯುಕವರು ಮರಂ ಹಾಕಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.