ADVERTISEMENT

ಟೀಚರ್ಸ್ ಕಾಲೊನಿಗೆ ಮೂಲಸೌಕರ್ಯ ಕಲ್ಪಿಸಿ: ಸ್ಥಳೀಯ ನಿವಾಸಿಗಳಿಂದ ಮನವಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:33 IST
Last Updated 2 ಜುಲೈ 2024, 14:33 IST

ರಾಯಚೂರು: ನಗರದ ವಾರ್ಡ್ ನಂಬರ್ 29ರ ಅಲ್ಲಮಪ್ರಭು ಕಾಲೊನಿಯಿಂದ ಟೀಚರ್ಸ್ ಕಾಲೊನಿಯ ವರೆಗೆ ರಸ್ತೆ ಡಾಂಬರೀಕರಣ ಮಾಡಿ ಚರಂಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅಲ್ಲಮಪ್ರಭು ಕಾಲೊನಿಯಿಂದ ಟೀಚರ್ಸ್ ಕಾಲೊನಿಗೆ ಹೋಗುವ 60 ಅಡಿ ಅಗಲದ ರಸ್ತೆಗೆ ಡಾಂಬರ್ ಹಾಕದ ಕಾರಣ ಕಚ್ಚಾ ರಸ್ತೆಯಿಂದ ತಿರುಗಾಡಲು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇಲ್ಲಿನ ಬೀದಿ ದೀಪಗಳಿಲ್ಲ, ಚರಂಡಿಗಳಿಲ್ಲದೇ ಇಲ್ಲಿನ ನಾಗರಿಕರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ದೂರಿದರು.

ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ನಗರಸಭೆ ಸದಸ್ಯರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಡಳಿತದಿಂದ ನಗರಸಭೆ ಅಧಿಕಾರಿಗೆ ನಿರ್ದೇಶನ ನೀಡಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. 

ADVERTISEMENT

ಸ್ಥಳೀಯ ನಿವಾಸಿಗಳಾದ ಅಕ್ಬರ್ ಅಲಿಮ ಇಮಾಮ್ ಹುಸೇನ್, ಜಿಲಾನಿ, ವೀರೇಶ, ನರಸಪ್ಪ, ಜಂಬಣ್ಣ, ವೆಂಕಟೇಶ, ಬುಡ್ಡಮ್ಮ, ತಾಯಮ್ಮ, ಲಕ್ಷ್ಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.