ADVERTISEMENT

ರಾಯಚೂರು: ಕರ್ಕಶ ಶಬ್ದ ಮಾಡಿದ ವಾಹನಗಳ ಸೈಲನ್ಸರ್‌ಗಳ ನಾಶ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 13:09 IST
Last Updated 24 ಜೂನ್ 2022, 13:09 IST
ಪೊಲೀಸ್‌ ಮೈದಾನದಲ್ಲಿ ಕರ್ಕಶ ಶಬ್ದ ಮತ್ತು ಭಾರಿ ಹೊಗೆಬಿಡುವ ವಾಹನಗಳ ಹೊಗೆ ಕೊಳವೆಗಳನ್ನು ನಾಶ ಪಡಿಸಲಾಯಿತು.
ಪೊಲೀಸ್‌ ಮೈದಾನದಲ್ಲಿ ಕರ್ಕಶ ಶಬ್ದ ಮತ್ತು ಭಾರಿ ಹೊಗೆಬಿಡುವ ವಾಹನಗಳ ಹೊಗೆ ಕೊಳವೆಗಳನ್ನು ನಾಶ ಪಡಿಸಲಾಯಿತು.   

ರಾಯಚೂರು: ಜಿಲ್ಲೆಯಾದ್ಯಂತ ಕರ್ಕಶ ಶಬ್ದ ಮತ್ತು ಭಾರಿ ಹೊಗೆಬಿಡುವ ವಾಹನಗಳ ವಿರುದ್ಧ ಒಂದು ವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ವಶಕ್ಕೆ ಪಡೆದಿದ್ದ ವಾಹನಗಳ ಹೊಗೆ ಕೊಳವೆಗಳನ್ನು ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ನಾಶಪಡಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಮ್ಮುಖ ಹೊಗೆ ಕೊಳವೆಗಳ ಮೇಲೆ ರೊಲರ್‌ ಹರಿಸಿ ಕೊಳವೆಗಳನ್ನು ಪುಡಿಗೊಳಿಸಲಾಯಿತು. ಕಳೆದ ಜೂನ್‌ 2 ರಿಂದ ಒಂದು ವಾರ ಕಾರ್ಯಾಚರಣೆ ನಡೆಸಿ, ಭಾರತೀಯ ಮೋಟಾರು ವಾಹನ (ಐಎಂವಿ) ಕಾಯ್ದೆಯಡಿ ಒಟ್ಟು 197 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಬೈಕ್‌ ಮಾಲೀಕರಿಗೆ ₹1,500 ಮತ್ತು ಲಘು ವಾಹನಗಳಿಗೆ ₹3 ಸಾವಿರ ದಂಡ ವಿಧಿಸಲಾಗಿದ್ದು, ಒಟ್ಟು ₹2,95,500 ದಂಡ ಸಂಗ್ರಹವಾಗಿದೆ.

’ಶಬ್ದ ಮತ್ತು ವಾಯು ಮಾಲಿನ್ಯ ಉಂಟು ಮಾಡುತ್ತಿದ್ದ ದೋಷಪೂರಿತ ಸೈಲನ್ಸರ್‌ಗಳನ್ನು ನಿಯಮಾನುಸಾರ ನಾಶಗೊಳಿಸಲಾಗಿದೆ‘ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.