ADVERTISEMENT

ದೇವದುರ್ಗ: ಪತ್ರಿಕಾ ದಿನಾಚರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 13:53 IST
Last Updated 30 ಜುಲೈ 2024, 13:53 IST
ಬಾಬು ಅಲಿ ಕರಡಿಗುಡ್ಡ
ಬಾಬು ಅಲಿ ಕರಡಿಗುಡ್ಡ   

ದೇವದುರ್ಗ: ಪಟ್ಟಣದ ಮುರಿಗೆಪ್ಪ ಖೇಣದ ಕಲ್ಯಾಣ ಮಂಟಪದಲ್ಲಿ ಬುಧವಾರ (ಜು.31) ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ತಾಲ್ಲೂಕು ಘಟಕ ಅಧ್ಯಕ್ಷ ಬಾಬು ಅಲಿ ಕರಡಿಗುಡ್ಡ ಹೇಳಿದ.

ಸಂಘದ ವತಿಯಿಂದ ನೀಡುವ ದುರ್ಗದ ಶ್ರೀ ಪ್ರಶಸ್ತಿಗೆ ತಾಲ್ಲೂಕಿನ ಐವರು ಯುವ ಪತ್ರಕರ್ತರಾದ ಯಮನೇಶ ಗೌಡಗೇರಾ, ಅಮರೇಶ ಚೀಲ್ಕರಾಗಿ, ಅಮರೇಶ ನಾಯಕ, ಶಿವರಾಜ ಜಗ್ಲಿ ಮತ್ತು ಸುರೇಶ ಗೌಡ ಆಯ್ಕೆ ಅವರನ್ನು ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಶಾಸಕಿ ಕರೆಮ್ಮ ಜಿ.ನಾಯಕ ಉದ್ಘಾಟಸಲಿದ್ದು, ರಾಯಚೂರು ಲೋಕಸಭಾ ಸಂಸದ ಜಿ ಕುಮಾರ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ, ಎ.ವಸಂತ ಕುಮಾರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಉಪವಿಭಾಗಾಧಿಕಾರಿ ಮೆಹಬೂಬಿ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಟಿಎಚ್ಒ ಡಾ ಬನದೇಶ್ವರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.