ರಾಯಚೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿ ಮಾಡುವುದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರುಶುಕ್ರವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಪ್ರಗತಿಪರ, ವಿದ್ಯಾರ್ಥಿ ಪರ ಎಂದು ಪ್ರಚಾರ ನಡೆಸುತ್ತಿದ್ದು ಇದು ವಾಸ್ತವವಾಗಿ ಶಿಕ್ಷಣ ಕ್ಷೇತ್ರ ಈಗಾಗಲೇ ಎದುರಿಸುತ್ತಿರುವ ದಾಖಲಾತಿ, ಅನುದಾನದ ಕೊರತೆ, ಮೂಲ ಸೌಕರ್ಯ ಭೋದಕರ ಕೊರತೆ ಖಾಸಗೀಕರಣದಿಂದಾಗಿ ಶುಲ್ಕ ಏರುತ್ತಿರುವ ಅಂಶಗಳ ಬಗ್ಗೆ ಗಮನಹರಿಸಿಲ್ಲ ಎಂದು ದೂರಿದರು.
ಹೊಸ ಶಿಕ್ಷಣದ ನೀತಿ ಖಾಸಗೀ ಕರಣವನ್ನು ಇನ್ನಷ್ಟು ಬೆಳೆಸುವ ನೀಲಿ ನಕ್ಷೆಯಾಗಿದೆ. ಬಹುದೊಡ್ಡ ಭಾಗವಾಗಿರುವ ಬಡವರಿಂದ ಶಿಕ್ಷಣವನ್ನು ಬಹುದೂರ ಕೊಂಡೊಯ್ಯುವ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಎನ್.ಪಿ.ಇ 1986ರ ಮುಂದುವರೆದ ಭಾಗವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಪೀರ್ ಸಾಬ್, ಕಾರ್ತಿಕ, ಹೇಮಂತ, ಬಸವರಾಜ, ಅಮೋಘ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.