ADVERTISEMENT

ಜಾಲಹಳ್ಳಿ: ಡಿವೈಎಫ್ಐ, ರೈತ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 14:33 IST
Last Updated 23 ಸೆಪ್ಟೆಂಬರ್ 2024, 14:33 IST
ಜಾಲಹಳ್ಳಿ ಪಟ್ಟಣದ ಗ್ರಾ.ಪಂ ಕಚೇರಿ ಎದುರು ಸೋಮವಾರ ವಿವಿಧ ಭೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಡಿವೈಎಫ್ಐ ಹಾಗೂ ಪ್ರಾಂತ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಿ‌ಮನವಿ ಸಲ್ಲಿಸಿದರು
ಜಾಲಹಳ್ಳಿ ಪಟ್ಟಣದ ಗ್ರಾ.ಪಂ ಕಚೇರಿ ಎದುರು ಸೋಮವಾರ ವಿವಿಧ ಭೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಡಿವೈಎಫ್ಐ ಹಾಗೂ ಪ್ರಾಂತ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಿ‌ಮನವಿ ಸಲ್ಲಿಸಿದರು   

ಜಾಲಹಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜನತಾ ಕಾಲೊನಿಯಲ್ಲಿನ ಜನತೆ ನಿತ್ಯ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.

ಡಿವೈಎಫ್ಐ ಸಂಘಟನೆಯ ಅಧ್ಯಕ್ಷ ರೀಯಾಜ್ ಆರ್ತಿ ಮಾತನಾಡಿ, ಜನತಾ ಕಾಲೊನಿಯಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ. ಅಲ್ಲದೇ ಪ್ರವಾಸಿ ಮಂದಿರದ ಹಿಂದೆ ಜನತೆಗೆ ಚರಂಡಿ ವ್ಯವಸ್ಥೆ ಇಲ್ಲದೇ ಸ್ನಾನ ಮಾಡಿದ ನೀರು ಬಾಕೇಟ್ ನಲ್ಲಿ ತುಂಬಿ ಹೊರಗಡೆ ಚೆಲ್ಲುವಂತಾಗಿದೆ. ಬಸವೇಶ್ವರ ವೃತ್ತದಿಂದ ಅಂಗನವಾಡಿ ವರೆಗೆ ಚರಂಡಿ ನಿರ್ಮಿಸದೇ ಇರುವುದರಿಂದ ಹಟ್ಟಿ ಮುಖ್ಯ ರಸ್ತೆಗೆ ಹೊಲಸು ನೀರು ಹರಿಯುತ್ತಿದೆ. ಇಂತಹ ಗಂಭೀರವಾದ ಸಮಸ್ಯೆಗಳು ಇದ್ದರೂ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಗಮನ ಹರಿಸದೇ ಇರುವುದರಿಂದ ಜನತೆ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿಯಬೇಕಾಗಿದೆ ಎಂದು ದೂರಿದರು.

ಭೇಟಿ: ಪ್ರತಿಭಟನ ಸ್ಥಳಕ್ಕೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ನರಸಪ್ಪ, ಮಲ್ಲಪ್ಪ ಅವರು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಏಳು ದಿನಗಳಲ್ಲಿ ಎಲ್ಲಾ ಸಮಸ್ಯೆಗಳ ಸರಿಪಡಿಸುವುದಾಗಿ ಲಿಖಿತ ಭರವಸೆ‌ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ.

ADVERTISEMENT

ಸಂಘಟನೆಯ ಮುಖಂಡರಾದ ನರಸಣ್ಣ ನಾಯಕ, ಶಿವಪ್ಪ, ಮಕ್ತೂಮ್ ಪಾರಶಿ, ರೀಯಾಜ್ ಖುರೈಶಿ, ಅಜೀಮ್ ಉದ್ದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.