ರಾಯಚೂರು: ರಾಜ್ಯದಲ್ಲಿ ನಡೆದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸಂಭ್ರಮಾಚರಣೆ ಮಾಡಲಾಯಿತು.
ಡಾ.ಬಿ.ಆರ್ ಅಂಬೇಡ್ಕರ ಪ್ರತಿಮೆಗೆ ಬಿಜೆಪಿ ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು. ಆನಂತರ ನಗರದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದು ಸಂತೋಷ ತಂದಿದೆ. ಇನ್ನೂ ಮುಂದೆ ಬಿಜೆಪಿ ಸರ್ಕಾರ ಸುಭದ್ರ ಆಡಳಿತ ನಡೆಸಲಿದೆ. ಜನರು ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ’ ಎಂದರು.
‘ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಗೆಲವು ಪಡೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಮುಂದಿನ ಮೂರುವರೆ ವರ್ಷ ಸುಸ್ಥಿರ ಆಡಳಿತ ನೀಡಲಿದೆ’ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಎನ್.ಶಂಕ್ರಪ್ಪ, ನಗರ ಅಧ್ಯಕ್ಷ ಬಿ.ಗೋವಿಂದ, ಯು.ದೊಡ್ಡಮಲ್ಲೇಶಪ್ಪ, ಮಿ.ಎಸ್.ಪಾಟೀಲ, ರವೀಂದ್ರ ಜಲ್ದಾರ, ಕಡಗೋಳ ರಾಮಚಂದ್ರಪ್ಪ, ಶ್ರೀನಿವಾಸರೆಡ್ಡಿ, ಶಶಿಧರ, ನಗರಸಭೆ ಸದಸ್ಯ ಈ ಶಶಿರಾಜ, ಎನ್.ಕೆ.ನಾಗರಾಜ, ಮಹೇಂದ್ರ ರೆಡ್ಡಿ, ಸನ್ನಿ ಡಿಯೋಲ್, ಬಿನ್ನಿ, ಬಂಡೇಶ ವಲ್ಕಂದಿನ್ನಿ, ಶರಣಮ್ಮ ಕಾಮರೆಡ್ಡಿ, ಮುಕ್ತಿಯಾರ, ರಾಘವೇಂದ್ರ ಉಟ್ಕೂರು, ಮುನಿರೆಡ್ಡಿ, ಆಂಜಿನೇಯ್ಯ, ಚಂದ್ರಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.