ರಾಯಚೂರು: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಪಟ್ಟಣ ಪಂಚಾಯಿತಿಗಳಲ್ಲಿ, ಬಿಜೆಪಿ ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದಿವೆ.
ಸಿರವಾರ ಪಟ್ಟಣ ಪಂಚಾಯಿತಿ 21 ಸ್ಥಾನಗಳ ಪೈಕಿ 9 ಕಾಂಗ್ರೆಸ್, 6 ಬಿಜೆಪಿ, 3 ಜೆಡಿಎಸ್ ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದಾರೆ. ತುರವಿಹಾಳ ಪಟ್ಟಣ ಪಂಚಾಯಿತಿ 14 ಸ್ಥಾನಗಳ ಪೈಕಿ ಕಾಂಗ್ರೆಸ್ 9, ಬಿಜೆಪಿ 2 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದಾರೆ.
ಕವಿತಾಳ ಪಟ್ಟಣ ಪಂಚಾಯಿತಿ 16 ಸ್ಥಾನಗಳ ಪೈಕಿ 8 ಕಾಂಗ್ರೆಸ್, 4 ಬಿಜೆಪಿ, 3 ಜೆಡಿಎಸ್ ಹಾಗೂ 1 ಪಕ್ಷೇತರರು ಆಯ್ಕೆಯಾಗಿದ್ದಾರೆ.
ಬಳಗಾನೂರ ಪಟ್ಟಣ ಪಂಚಾಯಿತಿ 12 ಬಿಜೆಪಿ ಸ್ಥಾನಗಳ ಪೈಕಿ 6 ಬಿಜೆಪಿ, 5 ಕಾಂಗ್ರೆಸ್, 1 ಪಕ್ಷೇತರ ಆಯ್ಕೆಯಾಗಿದ್ದಾರೆ.
ಮಸ್ಕಿ ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 16 ಬಿಜೆಪಿ ಹಾಗೂ 9 ಕಾಂಗ್ರೆಸ್ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.