ADVERTISEMENT

ಕವಿತಾಳ | ಸೂಲಗಿತ್ತಿ ಮಲ್ಲಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:41 IST
Last Updated 30 ಅಕ್ಟೋಬರ್ 2024, 14:41 IST
ಮಲ್ಲಮ್ಮ
ಮಲ್ಲಮ್ಮ   

ಕವಿತಾಳ: ಪಟ್ಟಣದ ನಿವಾಸಿ, ಸಹಜ ಹೆರಿಗೆ ಕೀರ್ತಿಯ ಸೂಲಗಿತ್ತಿ ಮಲ್ಲಮ್ಮ ಅವರ ಸಮಾಜ ಸೇವೆ ಗುರುತಿಸಿ ರಾಜ್ಯ ಸರ್ಕಾರ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹಜ ಹೆರಿಗೆ ಮಾಡಿಸುವ ಮೂಲಕ ಸೂಲಗಿತ್ತಿ ಎಂದೇ ಮನೆ ಮಾತಾಗಿರುವ 74 ವರ್ಷದ ಮಲ್ಲಮ್ಮ ಅವರು ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇದ್ದಾಗ ಮನೆ ಮನೆಗೆ ತೆರಳಿ ಸಹಜ ಹಾಗೂ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಮಗು ಮತ್ತು ತಾಯಿಯ ಜೀವ ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

‘ಕಳೆದ 40 ವರ್ಷಗಳಿಂದ ಸಹಜ ಹೆರಿಗೆ ಮಾಡಿಸುತ್ತಿದ್ದು, ಇದುವರೆಗೂ ಸಾವಿರಾರು ಮಹಿಳೆಯರ ಹೆರಿಗೆ ಮಾಡಿಸಿದ್ದೇನೆ. ಈ ಇಳಿ ವಯಸ್ಸಿನಲ್ಲೂ ತುರ್ತು ಸಮಯದಲ್ಲಿ ಯಾರಾದರೂ ಕರೆದರೆ ಮನೆಗೆ ತೆರಳಿ ಹೆರಿಗೆ ಮಾಡಿಸುತ್ತೇನೆ ಮತ್ತು ಹಸಗೂಸಿಗೆ ನೀರು ಹಾಕುವುದು ಮಾಡುತ್ತೇನೆ. ಸರ್ಕಾರ ನನ್ನ ಸೇವೆ ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಸಂತಸ ತಂದಿದೆ’ ಎಂದು ಮಲ್ಲಮ್ಮ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.