ADVERTISEMENT

ದೇವದುರ್ಗ | ಕಡಿಮೆಯಾಗದ ಚರ್ಮಗಂಟು ರೋಗ!

ಯಮುನೇಶ ಗೌಡಗೇರಾ
Published 16 ಜುಲೈ 2024, 7:01 IST
Last Updated 16 ಜುಲೈ 2024, 7:01 IST

ದೇವದುರ್ಗ ತಾಲ್ಲೂಕಿನ ಅರಕೇರಾ ಪಟ್ಟಣದಲ್ಲಿ ರೋಗಕ್ಕೆ ತುತ್ತಾದ ಕರು

ದೇವದುರ್ಗ ತಾಲ್ಲೂಕಿನ ಅರಕೇರಾ ಪಟ್ಟಣದಲ್ಲಿ ರೋಗಕ್ಕೆ ತುತ್ತಾದ ಕರು

ದೇವದುರ್ಗ: ಅರಕೇರಾ ಪಟ್ಟಣದ ವಿವಿಧೆಡೆ ಜಾನುವಾರುಗಳಿಗೆ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಜಾನುವಾರುಗಳು ಮೇವು ತಿನ್ನದೇ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.

ADVERTISEMENT

ಕಳೆದ ವರ್ಷ ತಾಲ್ಲೂಕಿನಾದ್ಯಂತ ನೂರಾರು ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಈಗ ಬೇಸಿಗೆಯಲ್ಲಿ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.

ತಾಲ್ಲೂಕಿನಲ್ಲಿ ಬರಗಾಲದಿಂದಾಗಿ ಮೇವಿಗಾಗಿ ಪರದಾಡಿದ್ದ ರೈತರು, ಪಕ್ಕದ ತಾಲ್ಲೂಕು ಹಾಗೂ ಬೇರೆ ಜಿಲ್ಲೆಗಳಿಂದ ಖರೀದಿಸಿ ಜಾನುವಾರಗಳನ್ನು ಮಾರಾಟ ಮಾಡದೇ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ ಕಳೆದ ವರ್ಷದಂತೆ ಮತ್ತೆ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಆರಂಭದಲ್ಲಿ ಒಂದೆರಡು ಜಾನುವಾರುಗಳಿಗೆ ತಗಲುವ ರೋಗ 3-4 ದಿನಗಳಲ್ಲಿ ಬಹುತೇಕ ಪಕ್ಕದ ಎಲ್ಲ ಜಾನುವಾರುಗಳಿಗೂ ಹರಡುತ್ತಿದೆ.

ಚರ್ಮ ಗಂಟು ರೋಗ ಕಡಿಮೆ ಅವಧಿಯಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ರೋಗ ತಗುಲಿದ ಜಾನುವಾರುಗಳನ್ನು ಕಚ್ಚಿದ ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕೀಟಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚಿದರೆ, ಅವುಗಳಿಗೂ ರೋಗ ಹರಡುತ್ತದೆ. ಜಾನುವಾರುಗಳಿಗೆ ಚರ್ಮಗಂಟು ರೋಗ ಮತ್ತೆ ಉಲ್ಬಣಗೊಂಡಿರುವುದು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಚರ್ಮಗಂಟು ರೋಗ ತೀವ್ರವಾಗಿತ್ತು. ನೂರಾರು ಜಾನುವಾರುಗಳು ಮೃತಪಟ್ಟಿದ್ದವು. ಕಳೆದ ವರ್ಷ ರೈತರು ರೋಗ ಭೀತಿಯಿಂದ ಜಾನುವಾರಗಳನ್ನು ಮಾರಾಟ ಮಾಡಿದ್ದರು. ಕೆಲವೊಬ್ಬರು ಮಾತ್ರ ಜಾನುವಾರುಗಳನ್ನು ಉಳಿಸಿಕೊಂಡಿದ್ದರು. ರೈತರಿಗೆ ಜಾನುವಾರು ಸಾಕುವುದೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಅನೇಕ ರೈತರು ಹೈನುಗಾರಿಕೆಯಿಂದ ದೂರ ಸರಿದಿದ್ದಾರೆ.

‘ರೋಗ ಕಾಣಿಸಿದರೆ, ಶೀಘ್ರ ಚಿಕಿತ್ಸೆ ಪಡೆದುಕೊಳ್ಳಿ’

ಜಾನುವಾರುಗಳಿಗೆ ಸಣ್ಣ-ಪುಟ್ಟ ರೋಗ ಕಾಣಿಸಿದರೆ ರೈತರು ನಿರ್ಲಕ್ಷಿಸಬಾರದು. ತಕ್ಷಣ ಪಶು ವೈದ್ಯರ ಬಳಿ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆಗೆ ಒಳಪಡಿಸಬೇಕು. ಚರ್ಮಗಂಟು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಒಂದರಿಂದ ಮತ್ತೊಂದು ಜಾನುವಾರುಗಳಿಗೆ ಹರಡುತ್ತದೆ. ರೈತರು ಮೊದಲೇ ಜಾಗೃತರಾಗಿ ಲಸಿಕೆ ಹಾಕಿಸಬೇಕು ಎಂದು ಅರಕೇರಾ ಪಶುಚಿಕಿತ್ಸಾಲಯ ಡಾ.ಪ್ರಕಾಶ ಅವರು ರೈತರಿಗೆ ಸಲಹೆ ನೀಡಿದ್ದಾರೆ.

ಚರ್ಮಗಂಟು ರೋಗದಿಂದ ಜಾನುವಾರುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪಶು ಸಂಗೋಪನೆ ಇಲಾಖೆಯವರು ಶೀಘ್ರ ಲಸಿಕೆ ಹಾಕಬೇಕು
ನಿಂಗಣ್ಣ ನಾಯಕ ಹವಾಲ್ದಾರ, ಅರಕೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.