ADVERTISEMENT

ಕವಿತಾಳ | ಲಕ್ಷ್ಮೀ ಪೂಜೆ, ಮನೆ ಮನಗಳಲ್ಲಿ ಸಡಗರ, ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:48 IST
Last Updated 31 ಅಕ್ಟೋಬರ್ 2024, 14:48 IST
ಕವಿತಾಳ ಪಟ್ಟಣದಅಂಗಡಿಯೊಂದರಲ್ಲಿ  ದೀಪಾವಳಿ ಅಮವಾಸ್ಯೆ ನಿಮಿತ್ತ ಗುರುವಾರ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು
ಕವಿತಾಳ ಪಟ್ಟಣದಅಂಗಡಿಯೊಂದರಲ್ಲಿ  ದೀಪಾವಳಿ ಅಮವಾಸ್ಯೆ ನಿಮಿತ್ತ ಗುರುವಾರ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು   

ಕವಿತಾಳ: ಪಟ್ಟಣದಲ್ಲಿ ಬಹುತೇಕ ಮನೆಗಳಲ್ಲಿ ಮತ್ತು ಕೆಲವು ವರ್ತಕರು ದೀಪಾವಳಿ ಅಮವಾಸ್ಯೆ ಅಂಗವಾಗಿ ಗುರುವಾರ ಲಕ್ಷ್ಮೀ ಪೂಜೆ ಮಾಡಿದರು.

ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಅಲಂಕರಿಸಿ ತುಂಬಿದ ತಂಬಿಗೆ ಮತ್ತು ಕಳಸ ಸ್ಥಾಪಿಸಿ ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿ ಗೃಹಣಿಯರು ಮನೆಯಲ್ಲಿ ಪೂಜೆ ನೆರವೇರಿಸಿದರೆ ವರ್ತಕರು ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಿದರು.

ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಹಕರಿಗೆ ಫಲ, ತಾಂಬೂಲ ಸೇರಿದಂತೆ ಸಿಹಿ ವಿತರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ADVERTISEMENT

‘ಚತುರ್ದಶಿ ಮತ್ತು ಅಮವಾಸ್ಯೆ ಒಟ್ಟಿಗೆ ಬಂದಿದ್ದು ಅಮವಾಸ್ಯೆ ಮಿತಿ ಶುಕ್ರವಾರ ಮದ್ಯಾಹ್ನದ ವರೆಗೆ ಮಾತ್ರ ಇರುವ ಕಾರಣ ಗುರುವಾರ ಸಂಜೆ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು’ ಎಂದು ಗೃಹಣಿ ಕವಿತಾ ತಿಳಿಸಿದರು.

ಪಟ್ಟಣದ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ದೀಪಾವಳಿ ಅಮವಾಸ್ಯೆ ನಿಮಿತ್ತ ಗುರುವಾರ ಲಕ್ಷ್ಮೀ ಪೂಜೆ ನೆಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.