ರಾಯಚೂರು: ಮಕ್ಕಳಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯ ಜೆಸಿಐ ಸಂಸ್ಥೆ ಮಾಡುತ್ತಿರುವುದು ಶ್ಲಾಘನಿಯ ಎಂದು ಜಿಲ್ಲಾ ಕನ್ನಡ ಜನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದರ ಹೇಳಿದರು.
ನಗರದ ಜೆಸಿಐ ಸಭಾಂಗಣದಲ್ಲಿ ಜೆಸಿಐ ರಾಯಚೂರು ಘಟಕ ಮತ್ತು ರಾಯಚೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಈಚೆಗೆ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90 ಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಥಾರ ‘ಸ್ಟುಡೆಂಟ್ ಎಕ್ಷಲೆನ್ಸ್ ಅವಾರ್ಡ್ 2019’ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಸಹ ಅದ್ಬುತ ಶೈಕ್ಷಣಿಕ ಸಾಧನೆ ಮಾಡುವ ಶಕ್ತಿ ಇದೆ ಎನ್ನುವದಕ್ಕೆ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ವಿಕಾಸ ನವಲಿ ಅವರು ಶೇ 97.76 ಅಂಕಗಳನ್ನು ಪಡೆದಿರುವುದು ಸಾಕ್ಷಿಯಾಗಿದೆ ಎಂದರು.
ಜೆಸಿಐ ರಾಯಚೂರು ಮಾಜಿ ಅದ್ಯಕ್ಷ ಜೆ.ಸಿ ಮಧು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಓದಬೇಕು ಎಂದು ಸಲಹೆ ನೀಡಿದರು.
ಜೆಸಿಐ ರಾಯಚೂರು ಘಟಕದ ಅಧ್ಯಕ್ಷ ಸೆನೆಟರ್ ವಿಜಯ ಮಹಾಂತೇಶ ಮಾತನಾಡಿ, ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧಕರಿದ್ದಾರೆ. ಎಲ್ಲರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಶ್ರೀ ಕೃಷ್ಣ ಅಕಾಡೆಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಜೆ.ಸಿ ಎನ್. ಮಧು ಮಾತನಾಡಿ, ಪ್ರತಿಭಾ ಪುರಸ್ಕಾರ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣಕ್ಕಾಗಿ ಉಚಿತ ಪ್ರವೇಶ ನೀಡಲಾಗುವುದು. ಇದರಿಂದ ನಮ್ಮ ಕಾರ್ಯಕ್ರಮಕ್ಕೆ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹಿಸಿದಂತಾಗಿದೆ ಎಂದರು.
ಅಗ್ನಿಶಾಮಕ ದಳದ ಮಾನ್ವಿ ತಾಲ್ಲೂಕು ಪ್ರಭಾರಿ ಅಧಿಕಾರಿ ಚೆನ್ನಮಲ್ಲಿಕಾರ್ಜುನ ಮತ್ತು ಆರೋಗ್ಯ ಸಹಾಯಕ ಸುದರ್ಶನ ಅವರನ್ನು ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಜೆಸಿಐ ಸಂಸ್ಥಾಪಕ ಅಧ್ಯಕ್ಷ ಸೆನೆಟರ್ ಗೌತಮ ಕುಮಾರ ಜೈನ್ ಮಾತನಾಡಿದರು.
ಪ್ರತಿಭಾವಂತರಿಗೆ ಪದಕ, ಪ್ರಮಾಣಪತ್ರ ಮತ್ತು ₹ 500 ನಗದು ಪ್ರೋತ್ಸಾಹ ಧನವನ್ನು ನೀಡಲಾಯಿತು. ದಾನಿಗಳಾದ ಜೆ.ಸಿ. ನವೀನ ಎಚ್ ಮತ್ತು ಜೆ.ಸಿ ವಿಜಯ ಸಕ್ರಿಯವರಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮ ಸಂಯೋಜಕರುಗಳಾದ ಜೆ.ಸಿ ರಿಕಬ್ ಚಂದ, ಜೆ.ಸಿ ನವಿನ್ ಎಚ್, ಜೆ.ಸಿ ವಿಜಯ ಸಕ್ರಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಾಧ ಅರ್ಜುನ ಮತ್ತು ಪರಮೇಶ ನಾಯಕ ಇದ್ದರು. ಜೆ.ಸಿ ವಿಜಯ ಸಕ್ರಿ ಮತ್ತು ಜೆ.ಸಿ ರಿಕಬ್ ಚಂದ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.