ಲಿಂಗಸುಗೂರು: ಸರ್ಕಾರ ರಾಜ್ಯ ವ್ಯಾಪಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದಂತೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಅಂಗವಿಕಲರಿಗೆ ಈಗಿರುವ ಪ್ರಯಾಣ ಮಿತಿಯನ್ನು ವಿಸ್ತರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಆರ್‌ಪಿಡಿ ಟಾಸ್ಕ್ ಪೋರ್ಸ್ ತಾಲ್ಲೂಕು ಸಮಿತಿ ಒತ್ತಾಯಿಸಿದೆ.
ಸೋಮವಾರ ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಅವರಿಗೆ ಮನವಿ ಸಲ್ಲಿಸಿ, ಅಂಗವಿಕಲರಿಗೆ ಕೇವಲ 100 ಕಿ.ಮೀ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಈ ಪ್ರಯಾಣಕ್ಕೆ ವರ್ಷಕ್ಕೆ ₹ 660 ಹಣ ಪಾವತಿಸಿ ಪಾಸ್ ಪಡೆಯುತ್ತಿದ್ದೇವೆ. ಕೋಟ್ಯಂತರ ಮಹಿಳೆಯರಿಗೆ ನೀಡಿದಂತೆ ಕೇವಲ 11 ಲಕ್ಷ ಜನಸಂಖ್ಯೆ ಹೊಂದಿದ ತಮಗೂ ಪ್ರಯಾಣ ಮಿತಿ ವಿಸ್ತರಿಸಿ ನ್ಯಾಯ ಒದಗಿಸಬೇಕು ಎಂದು ಕೋರಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಭಂಡಾರಿ, ತಾಲ್ಲೂಕು ಘಟಕ ಅಧ‍್ಯಕ್ಷ ಅಜಿಮಲ್ ಅಹ್ಮದ್ ಜಮೀನ್ದಾರ್. ಮುಖಂಡರಾದ ಅಸ್ಕಿಹಾಳ ನಾಗರಾಜ, ಮಾನಪ್ಪ, ರಾಜಾಸಾಬ, ಮಹಾದೇವಿ, ಹುಸೇನಬಾಷ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.