ADVERTISEMENT

ಅ.9ರಂದು ಅರ್‌ಎಸ್‌ಎಸ್‌ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:47 IST
Last Updated 6 ಅಕ್ಟೋಬರ್ 2024, 14:47 IST

ಮಸ್ಕಿ: ವಿಜಯ ದಶಮಿ ಹಾಗೂ ಅರ್‌ಎಸ್‌ಎಸ್ ಸಂಸ್ಥಾಪನ ದಿನದ ನಿಮಿತ್ತ ಪಟ್ಟಣದಲ್ಲಿ ಅ. 9ರಂದು ಸ್ವಯಂ ಸೇವಕರ ಪಥ ಸಂಚಲನ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ತೆರಿನ ಮನೆ ಮುಂಭಾಗದಿಂಸ ಗಣವೇಷದಾರಿ ಸ್ವಯಂ ಸೇವಕರ ಪಥ ಸಂಚಲನ ಘೋಷ್ ವಾದ್ಯದೊಂದಿಗೆ ಆರಂಭವಾಗಲಿದೆ.

ಉಪ್ಪಲದೊಡ್ಡಿ ಪೇಟೆ, ಗಾಡಿ ಬಾವಿ, ಸಂತೆ ಬಜಾರ, ಅಶೋಕ ವೃತ್ತ, ಚೆನ್ನಮ್ಮ‌ ವೃತ್ತ, ದೈವದಕಟ್ಟೆ, ತೆರು ಬೀದಿ ಮೂಲಕ ನರಸನಗೌಡ ಸ್ಮಾರಕ ಆಂಗ್ಲ ಮಾದ್ಯಮ ಶಾಲೆಯ ಆವರಣಕ್ಕೆ ಆಗಮಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ADVERTISEMENT

ಸಂಜೆ 5 ಕ್ಕೆ ಶಾಲಾ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ನಾಯ್ಕ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ತಿರುಪತಿ ಮಡಿವಾಳ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.