ಮಸ್ಕಿ: ಪಟ್ಟಣದ ನಿವಾಸಿ, ಸಂಶೋಧಕ ಡಾ.ಚನ್ನಬಸಯ್ಯ ಹಿರೇಮಠ ಅವರಿಗೆ 2019ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಪ್ರಸಕ್ತ ರಾಯಚೂರಿನ ತಾರನಾಥ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಅವರ ಸಂಶೋಧನಾ ಗ್ರಂಥ ‘ಅನಾವರಣ’ ಕ್ಕೆ ಈ ಪ್ರಶಸ್ತಿ ದೊರಕಿದೆ.
ಪ್ರಶಸ್ತಿಯು ₹25 ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಡಾ.ಚನ್ನಬಸಯ್ಯ ಹಿರೇಮಠ ಅವರು ಇದುವರೆಗೆ 10 ಸಂಶೋಧನಾ ಗ್ರಂಥಗಳು, 14 ಸಂಪಾದಿತ ಕೃತಿಗಳು ಹಾಗೂ ಎರಡು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.
‘ಪ್ರಶಸ್ತಿ ದೊರತಿರುವುದು ಸಂತಸ ತಂದಿದೆ. ಮತ್ತಷ್ಟು ಕೆಲಸ ಮಾಡಲು ಶಕ್ತಿ ನೀಡಿದೆ’ ಎಂದು ಪ್ರಶಸ್ತಿ ಪುರಸ್ಕೃತ ಡಾ.ಚನ್ನಬಸಯ್ಯ ಹಿರೇಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.