ADVERTISEMENT

ಸಂಕ್ರಮಣ: ಅಯ್ಯಪ್ಪ ಸ್ವಾಮಿಗೆ ವಿಶೇಷಪೂಜೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 15:35 IST
Last Updated 14 ಜನವರಿ 2021, 15:35 IST
ರಾಯಚೂರಿನ ವಾಲ್ಕಟ್‌ ಮೈದಾನದಲ್ಲಿ ಮಕರ ಸಂಕ್ರಮಣ ದಿನದಂದು ಗುರುವಾರ ಅಯ್ಯಪ್ಪಸ್ವಾಮಿ ಪಡಿಪೂಜೆಯನ್ನು ಸಂಭ್ರಮದೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು
ರಾಯಚೂರಿನ ವಾಲ್ಕಟ್‌ ಮೈದಾನದಲ್ಲಿ ಮಕರ ಸಂಕ್ರಮಣ ದಿನದಂದು ಗುರುವಾರ ಅಯ್ಯಪ್ಪಸ್ವಾಮಿ ಪಡಿಪೂಜೆಯನ್ನು ಸಂಭ್ರಮದೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು   

ರಾಯಚೂರು: ಸಂಕ್ರಮಣ ದಿನದಂದು ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಮಹೋತ್ಸವ, ಮಹಾಮಂಡಲ ಪಡಿಪೂಜೆ ಮತ್ತು ಹೋಂ ಹವನ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದೊಂದಿಗೆ ಗುರುವಾರ ನೆರವೇರಿದವು.

ನಗರದ ವಾಲ್ಕಟ್‌ ಮೈದಾನದಲ್ಲಿ ಎನ್‌.ಎಸ್‌.ಬೋಸರಾಜು ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತರು, ಗುರುಸ್ವಾಮಿಗಳುಭಾಗಿಯಾಗಿದ್ದರು.

ನಗರದ ಎಲ್ಲಾ ಆಶ್ರಮಗಳ ಗುರುಸ್ವಾಮಿ ಹಾಗೂಅಯ್ಯಪ್ಪಭಕ್ತರ ನೇತೃತ್ವದಲ್ಲಿ ಈ ಚಕ್ರ ಜ್ಯೋತಿ ದರ್ಶನ, ಮಹಾಮಂಗಳಾರತಿ, ಅಯ್ಯಪ್ಪಸ್ವಾಮಿ ಮೂರ್ತಿಯ ಮೆರವಣಿಗೆ ನಡೆಯಿತು. ಶ್ರದ್ಧಾಭಾವದಲ್ಲಿ ಮುಳುಗಿದ್ದ ಭಕ್ತಾದಿಗಳೆಲ್ಲ ಮೆರವಣಿಗೆ ಉದ್ದಕ್ಕೂ ಜಯಘೋಷಗಳು, ಅಯ್ಯಪ್ಪಸ್ವಾಮಿ ಪರ ಭಕ್ತಪ್ರದಾನ ಹಾಡು ಹೇಳಿದರು. ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ಭಕ್ತರು ಬರಿಗಾಲಿನಲ್ಲಿಯೇ ಸೇವೆ ಸಲ್ಲಿಸಿದರು.

ADVERTISEMENT

ವ್ರತಾಚರಣೆ ಮಾಡಿದ್ದ ಅಯ್ಯಪ್ಪಸ್ವಾಮಿ ಭಕ್ತರು ಈ ವರ್ಷ ಮಕರ ಸಂಕ್ರಮಣ ದಿನದಂದು ಶಬಲಿಮಲೆಗೆ ಹೋಗುವುದಕ್ಕೆ ಸಾಧ್ಯವಾಗಲಿಲ್ಲ. ಕೋವಿಡ್‌ ಕಾರಣದಿಂದ ಈ ವರ್ಷ ಮಕರಜ್ಯೋತಿ ದರ್ಶನಕ್ಕಾಗಿ ಜನರು ಸೇರುವುದನ್ನು ನಿರ್ಬಂಧ ಹಾಕಲಾಗಿದೆ. ಹೀಗಾಗಿ ಸ್ಥಳೀಯವಾಗಿಯೇ ಸ್ವಾಮಿಯನ್ನು ಸ್ಮರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.

ನೆರೆದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೈದಾನದಲ್ಲಿ ವಿಶಾಲವಾದ ಪೆಂಡಾಲ್‌ ಹಾಕಲಾಗಿತ್ತು. 18 ಮೆಟ್ಟಿಲುಗಳ ಅಲಂಕಾರ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ಮಾದರಿಗಳು ಭಕ್ತಿಭಾವ ಹೆಚ್ಚಿಸುವಂತಿದ್ದವು.

ಪೂಜಾ ಕಾರ್ಯಗಳಲ್ಲಿ ಎನ್‌.ಎಸ್‌.ಬೋಸರಾಜು, ರವಿ ಬೋಸರಾಜು ದಂಪತಿ, ಬಿ.ರಮೇಶ, ಜಿ. ತಿಮ್ಮಾರೆಡ್ಡಿ, ಜಿ.ಬಸವರಾಜ ರೆಡ್ಡಿ, ದೇವಣ್ಣ ನಾಯಕ, ಅಯ್ಯಪ್ಪಮಾಲಾಧಾರಿ ಡಿ.ವೀರೇಶ, ಗುರು ವಿಶ್ವಕರ್ಮ, ಕೇಶವರೆಡ್ಡಿ, ಮಹೇಂದ್ರ, ಸಂಜು ಆಚಾರಿ, ಮಹಾಂತೇಶ, ಪ್ರಭುಕಾಂತ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.