ADVERTISEMENT

ಮಸ್ಕಿ | ಎರಡು ದಿನ ರಾಜ್ಯ ವೈಜ್ಞಾನಿಕ ಸಮ್ಮೇಳನ: ಹುಲಿಕಲ್ ನಟರಾಜ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 14:22 IST
Last Updated 18 ನವೆಂಬರ್ 2023, 14:22 IST
ಮಸ್ಕಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹುಲಿಕಲ್ ನಟರಾಜ್ ಮಾತನಾಡಿದರು
ಮಸ್ಕಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹುಲಿಕಲ್ ನಟರಾಜ್ ಮಾತನಾಡಿದರು   

ಮಸ್ಕಿ: ‘ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಡಿಸೆಂಬರ್ 29 ಹಾಗೂ 30 ರಂದು ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಮುಖ್ಯಸ್ಥ ಹುಲಿಕಲ್ ನಟರಾಜ್ ತಿಳಿಸಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,‘ವಿಜ್ಞಾನ–ತಂತ್ರಜ್ಞಾನದ ಯುಗದಲ್ಲಿ ಮೌಢ್ಯತೆ ಹೋಗಲಾಡಿಸಿ ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಸಮ್ಮೇಳನದ ಮೂಲ ಉದ್ದೇಶ’ ಎಂದರು.

ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಅನೇಕ ಸಚಿವರು, ಶಾಸಕರು ಹಾಗೂ ಪ್ರಗತಿಪರ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ನಡೆಯುವ ಐತಿಹಾಸಿಕ ಸಮ್ಮೇಳನದಲ್ಲಿ ಮಸ್ಕಿ ಪಟ್ಟಣ ಹಾಗೂ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಶಿವಶರಣಪ್ಪ ಇತ್ಲಿ, ಸಾಹಿತಿ ಮಹಾಂತೇಶ ಮಸ್ಕಿ, ಚಿರಂಜಿವಿ ರಾಯಚೂರು, ಅಪ್ಪಾಜಿಗೌಡ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಬ್ಯಾಳಿ, ಮಲ್ಲಿಕಾರ್ಜುನ ನಾಯಿನೇಗಲಿ, ಮಹಾಮನೆ ಸಮಿತಿ ಅಧ್ಯಕ್ಷ ದುರಗಪ್ಪ ಮಾಸ್ತರ್, ಸುಕಮುನಿಯಪ್ಪ ನಾಯಕ, ವೈಜ್ಞಾನಿಕ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಶಬನಾ ಬೇಗಂ ಹಾಗೂ ದೊಡ್ಡಪ್ಪ ಗಬ್ಬೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.