ADVERTISEMENT

ರಾಯಚೂರು | ಎಸ್‌ಡಿಎ ಪರೀಕ್ಷೆ: ಅಂಗಿ ತೋಳು ಕತ್ತರಿಸಿಕೊಂಡ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2023, 8:12 IST
Last Updated 19 ನವೆಂಬರ್ 2023, 8:12 IST
<div class="paragraphs"><p>ಅಂಗಿ ತೋಳು ಕತ್ತರಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು</p></div>

ಅಂಗಿ ತೋಳು ಕತ್ತರಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು

   

ರಾಯಚೂರು: ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಡಿಎ ದ್ವಿತೀಯ ವೃಂದದ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆಯಿತು. ಪರೀಕ್ಷಾ ಪ್ರಾಧಿಕಾರ ವಸ್ತ ಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಯುವತಿಯರು ಪ್ರವೇಶ ದ್ವಾರದಲ್ಲೇ ಹೈಹಿಲ್‌ ಚಪ್ಪಲಿ ಕಳೆದರೆ, ಯುವಕರು ಅಂಗಿ ತೋಳು ಕತ್ತರಿಸಿಕೊಂಡು ಪರೀಕ್ಷೆಗೆ ಹಾಜರಾದರು.

‌ಹಾಲ್‌ ಟಿಕೆಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ ಕೆಲವರು ಜೀನ್ಸ್‌, ಉದ್ದ ತೋಳಿನ ಶರ್ಟ್ ಧರಿಸಿ ಬಂದಿದ್ದರು. ಉದ್ದ ತೋಳಿನ ಶರ್ಟ್‌ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪೊಲೀಸರು ಪ್ರವೇಶ ದ್ವಾರದಲ್ಲಿ ಕತ್ತರಿ ಕೊಟ್ಟು ತೋಳು ಕತ್ತರಿಸಿಕೊಳ್ಳಲು ಸಲಹೆ ನೀಡಿದರು.

ADVERTISEMENT

ಹಾಲ್‌ ಟಿಕೆಟ್‌ನಲ್ಲಿಯ ಸೂಚನೆ ನೋಡಿಕೊಳ್ಳದೇ ಬಂದಿದ್ದ ಕೆಲವರು ಅನ್ಯ ಮಾರ್ಗವಿಲ್ಲದೇ ಕತ್ತರಿಯಿಂದ ಅಂಗಿ ತೋಳು ಕತ್ತರಿಸಿ ಪ್ರವೇಶ ದ್ವಾರದಲ್ಲಿ ಬಿಸಾಕಿದರು. ಯುವತಿಯರು ಕಿವಿಯೋಲೆ, ಮೂಗುತಿ, ಕೊರಳಲ್ಲಿನ ಸರ ತೆಗೆದು ಸಂಬಂಧಿಕರ ಕೈಗೆ ಒಪ್ಪಿಸಿದರು. ನಂತರ ಅವರಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.