ಮಸ್ಕಿ: ಲಿಂಗಸುಗೂರು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ವಿಭಜಿಸಿ ಮಸ್ಕಿಯನ್ನು ಪ್ರತ್ಯಕ ಕೃಷಿ ಉತ್ಪನ್ನ ಮಾರುಕಟ್ಟೆಯನ್ನಾಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸಹಕಾರಿ ಇಲಾಖೆಯ ಅಧಿನ ಕಾರ್ಯದರ್ಶಿ ಜಿ.ಎನ್. ಧನಲಕ್ಷ್ಮೀ ಜು.6 ರಂದು ಆದೇಶ ಹೊರಡಿಸಿದ್ದು ಪ್ರತ್ಯಕ ಕೃಷಿ ಮಾರುಕಟ್ಟೆಗೆ ಆಕ್ಷೇಪಣೆ ಇದ್ದಲ್ಲಿ 30 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಲಿಂಗಸುಗೂರು, ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕು ಹಳ್ಳಿಗಳನ್ನೊಳಗೊಂಡು ರಚನೆಯಾಗಿರುವ ಮಸ್ಕಿ ನೂತನ ತಾಲ್ಲೂಕು ಕೇಂದ್ರವಾದ ಮೇಲೆ ಈ ತಾಲ್ಲೂಕಿಗೆ ಒಳಪಡುವ ಮೂರು ತಾಲ್ಲೂಕುಗಳನ್ನೊಳಗೊಂಡು ನೂತನ ಕೃಷಿ ಮಾರುಕಟ್ಟೆ ರಚನೆ ಬಗ್ಗೆ ಹಲವಾರು ದಿನಗಳಿಂದ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಿನ್ನೆಲೆ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.