ADVERTISEMENT

ಸಿಂಧನೂರಿಗೆ ಮೆರುಗು ತಂದ ‘ದಸರಾ’

ಡಿ.ಎಚ್.ಕಂಬಳಿ
Published 11 ಅಕ್ಟೋಬರ್ 2024, 7:00 IST
Last Updated 11 ಅಕ್ಟೋಬರ್ 2024, 7:00 IST
<div class="paragraphs"><p>ಸಿಂಧನೂರಿನ ಆರ್‌ಜಿಎಂ ಶಾಲಾ ಆವರಣದಲ್ಲಿ ದಸರಾ ಉತ್ಸವ ಅಂಗವಾಗಿ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ</p></div>

ಸಿಂಧನೂರಿನ ಆರ್‌ಜಿಎಂ ಶಾಲಾ ಆವರಣದಲ್ಲಿ ದಸರಾ ಉತ್ಸವ ಅಂಗವಾಗಿ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ

   

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಥಮ ಬಾರಿಗೆ ಮೈಸೂರು ದಸರಾ ಮಹೋತ್ಸವದ ಮಾದರಿಯಲ್ಲಿ ಸಿಂಧನೂರಿನಲ್ಲಿ ಒಂಬತ್ತು ದಿನಗಳ ಕಾಲ ನಡೆಯುತ್ತಿರುವ ದಸರಾ ಉತ್ಸವವು ಎಲ್ಲರನ್ನು ಒಗ್ಗೂಡಿಸುವ ಮೂಲಕ ಜನರಲ್ಲಿ ಹೊಸ ಹುಮ್ಮಸ್ಸು ಮತ್ತು ಮೆರಗು ತಂದಿದೆ.

ಶಾಸಕ ಹಂಪನಗೌಡ ಬಾದರ್ಲಿ ಅವರು ಪಕ್ಷಬೇಧ ಮರೆತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಜೊತೆಯಾಗಿಸಿಕೊಂಡು ಎರಡು ತಿಂಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು, ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಮಹಿಳಾ ಸಂಘಟನೆಗಳು, ಕಲಾವಿದರು, ವಿದ್ಯಾರ್ಥಿ- ಯುವಜನರನ್ನು ಒಳಗೊಂಡಂತೆ ಹತ್ತಾರು ಸಭೆಗಳನ್ನು ನಡೆಸಿ, ಕಾರ್ಯಕ್ರಮದ ರೂಪ-ರೇಷ ಸಿದ್ದಪಡಿಸಿದ್ದರಿಂದ ದಸರಾ ಉತ್ಸವ ಅರ್ಥಪೂರ್ಣವಾಗಲು ಸಾಧ್ಯವಾಗಿದೆ.

ADVERTISEMENT

’ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾತಂಡಗಳನ್ನು ಆಹ್ವಾನಿಸಿ ಸಿಂಧನೂರಿನ ತಾಲ್ಲೂಕಿನ ಜನತೆಗೆ ಪರಿಚಯಿಸುವ ಮೂಲಕ ಭಾವೈಕ್ಯತೆಗೆ ಬುನಾದಿ ಹಾಕಿದಂತಾಗಿದೆ’ ಎನ್ನುವುದು ಸಾಹಿತಿ ಹೆಚ್.ಜಿ.ಹಂಪಣ್ಣ ಅಭಿಪ್ರಾಯ.

ಅ.4 ರಂದು ಸಿಂಧನೂರು ದಸರಾ ಉತ್ಸವ ‘ಸೌಹಾರ್ದ ನಡಿಗೆ’ಯೊಂದಿಗೆ ಪ್ರಾರಂಭವಾದದ್ದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಿದ್ದು, ಇಡೀ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಂತಿತ್ತು. ಅದೇ ದಿನ ನಡೆದ ಕಲ್ಯಾಣ ದಸರಾದಲ್ಲಿ 371ಜೆ ಕಲಂ ಜಾರಿಗೆ ಶ್ರಮಿಸಿದ್ದಕ್ಕೆ ಸಿದ್ದರಾಮಯ್ಯ ಮತ್ತು ಸಚಿವ ಎಚ್.ಕೆ.ಪಾಟೀಲರಿಗೆ ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು.

5 ರಂದು ಸಾಂಸ್ಕೃತಿಕ ದಸರಾ, 6 ರಂದು ಸಾಹಿತ್ಯ ದಸರಾ, 7 ರಂದು ಮಹಿಳಾ ದಸರಾ, 8 ರಂದು ರೈತರ ದಸರಾ, 9 ರಂದು ಕ್ರೀಡಾ ಮತ್ತು ಆರೋಗ್ಯ ದಸರಾ, 10 ರಂದು ಕಲಾ ದಸರಾ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುವ ಮೂಲಕ ಸಿಂಧನೂರಿನ ಕಡೆ ಎಲ್ಲರೂ ನೋಡುವಂತೆ ಮಾಡಿದೆ.

ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಸರ್ಕಾರಿ ನೌಕರರಿಗೆ, ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ಎಪಿಎಂಸಿ ಪ್ರಾಂಗಣದಲ್ಲಿ ವಿವಿಧ ಇಲಾಖೆಗಳಿಂದ ದೊರೆಯುವ ಯೋಜನೆಗಳ ಕುರಿತು ಮಾಹಿತಿ ಪ್ರದರ್ಶನ, ಟೌನ್‍ಹಾಲ್‍ನಲ್ಲಿ ಪ್ರತಿದಿನ ಸಂಜೆ ತತ್ವಪದ, ಜಾನಪದ, ಗೀಗಿಪದ, ಭಜನೆ, ಲಾವಣಿ ಗಾಯನ, ರಾತ್ರಿ ನಾಟಕಗಳ ಪ್ರದರ್ಶನ, ಆರ್‌ಜಿಎಂ ಶಾಲಾ ಆವರಣದಲ್ಲಿ ಪ್ರತಿದಿನ ಸಂಜೆ ಧಾರ್ಮಿಕ ಕಾರ್ಯಕ್ರಮ, ವಿವಿಧ ವಿಷಯಗಳ ಕುರಿತು ಗೋಷ್ಠಿಗಳು, ಸಂಗೀತ, ನೃತ್ಯ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು, ಚಿತ್ರಕಲಾವಿದರ ಕೈಯಲ್ಲಿ ಅರಳಿದ ಕಲಾಕೃತಿಗಳ ಪ್ರದರ್ಶನಗಳು ನಗರ, ಹಳ್ಳಿ, ಕ್ಯಾಂಪ್‍ಗಳು ಅಷ್ಟೇ ಅಲ್ಲ ನೆರೆಹೊರೆಯ ತಾಲ್ಲೂಕಿನ ಜನರನ್ನು ಆಕರ್ಷಿಸುತ್ತಿದ್ದು, ಸಂಜೆಯಾದರೆ ಸಾಕು ಮಹಿಳೆಯರು, ಮಕ್ಕಳು, ಯುವಕ-ಯುವತಿಯರು, ನಾಗರಿಕರು ಸಹಸ್ರಾರು ಸಂಖ್ಯೆಯಲ್ಲಿ ಆರ್‍ಜಿಎಂ ಶಾಲಾ ಆವರಣದತ್ತ ಧಾವಿಸುತ್ತಿರುವುದು ಕಂಡು ಬರುತ್ತಿದೆ.

‘ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿ ದಸರಾ ಯಶಸ್ವಿಗೆ ಪಣತೊಟ್ಟಿದ್ದಾರೆ. ಇಂತಹ ಸೌಹಾರ್ದತಯುತ ವಾತಾವರಣ ನಿರ್ಮಾಣಕ್ಕೆ ಜನತೆ ಪಿಧಾ ಆಗಿರುವುದಂತೂ ಸತ್ಯ ಎನ್ನುತ್ತಾರೆ’ ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್, ಬೀರಪ್ಪ ಶಂಭೋಜಿ, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ.

12ರಂದು ಸಿಂಧನೂರು ಜಂಬೂ ಸವಾರಿ

ಅ.11 ರಂದು ಸಂಜೆ 7 ರಿಂದ 10 ಗಂಟೆಯವರೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಖ್ಯಾತ ಗಾಯಕರಾದ ವಿಜಯಪ್ರಕಾಶ ಮತ್ತು ಅನುರಾಧ ಭಟ್ ಅವರ ತಂಡದಿಂದ ಅದ್ದೂರಿ ಗಾಯನ ಕಾರ್ಯಕ್ರಮ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ.

ಅ.12 ರಂದು ಸಿಂಧನೂರು ಜಂಬೂ ಸವಾರಿ ಅಂಗವಾಗಿ ಆನೆಯ ಮೇಲೆ ಅಂಬಾರಿಯಲ್ಲಿ ಈ ಭಾಗದ ಅಧಿದೇವತೆಯಾದ ಸಿದ್ಧಪರ್ವತ ಅಂಬಾಮಠದ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಮಧ್ಯಾಹ್ನ 3 ಗಂಟೆಗೆ ಮಿನಿವಿಧಾನಸೌಧದಿಂದ ಬಸವೇಶ್ವರ ವೃತ್ತ, ಹಳೆಬಜಾರ್ ರಸ್ತೆ, ಕನಕದಾಸ ವೃತ್ತದ ಮೂಲಕ ಆರ್‍ಜಿಎಂ ಶಾಲಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು. ನಂತರ ಸಾರ್ವಜನಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆದು, ಸಿಂಧನೂರು ದಸರಾ ಉತ್ಸವಕ್ಕೆ ತೆರೆ ಬೀಳಲಿದೆ.


12ರಂದು ಸಿಂಧನೂರು ಜಂಬೂ ಸವಾರಿ

ಅ.11 ರಂದು ಸಂಜೆ 7 ರಿಂದ 10 ಗಂಟೆಯವರೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಖ್ಯಾತ ಗಾಯಕರಾದ ವಿಜಯಪ್ರಕಾಶ ಮತ್ತು ಅನುರಾಧ ಭಟ್ ಅವರ ತಂಡದಿಂದ ಅದ್ದೂರಿ ಗಾಯನ ಕಾರ್ಯಕ್ರಮ ನಡೆಯಲಿದ್ದು, ಅಪಾರ ಸಂಖ್ಯೆಯ ಅಂಶದಲ್ಲಿಜನ ಸೇರುವ ನಿರೀಕ್ಷೆಯಿದೆ.

ಅ.12 ರಂದು ಸಿಂಧನೂರು ಜಂಬೂ ಸವಾರಿ ಅಂಗವಾಗಿ ಆನೆಯ ಮೇಲೆ ಅಂಬಾರಿಯಲ್ಲಿ ಈ ಭಾಗದ ಅಧಿದೇವತೆಯಾದ ಸಿದ್ಧಪರ್ವತ ಅಂಬಾಮಠದ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಮಧ್ಯಾಹ್ನ 3 ಗಂಟೆಗೆ ಮಿನಿವಿಧಾನಸೌಧದಿಂದ ಬಸವೇಶ್ವರ ವೃತ್ತ, ಹಳೆಬಜಾರ್ ರಸ್ತೆ, ಕನಕದಾಸ ವೃತ್ತದ ಮೂಲಕ ಆರ್‍ಜಿಎಂ ಶಾಲಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು. ನಂತರ ಸಾರ್ವಜನಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆದು, ಸಿಂಧನೂರು ದಸರಾ ಉತ್ಸವಕ್ಕೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.