ಸಿರವಾರ: ಡಿ.27 ರಂದು ಪಟ್ಟಣ ಪಂಚಾಯಿತಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಾಸ್ ಪ್ರಕ್ರಿಯೆ ಮುಗಿದಿದ್ದು, 20 ವಾರ್ಡ್ ಗಳಿಗೆ 73 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಜೆಪಿಯು 20 ವಾರ್ಡ್‌ಗಳಿಗೆ ಪೂರ್ಣ ಅಭ್ಯರ್ಥಿಗಳನ್ನು ನಿಲ್ಲಿಸಲು ವಿಫಲವಾಗಿದ್ದು, 5 ವಾರ್ಡ್‌ಗಳಿಗೆ ಅಭ್ಯರ್ಥಿಗಳೇ ಇಲ್ಲದಿರುವುದು ಪಕ್ಷದ ನಾಯಕರ ನಿರಾಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿದ ನಂತರ ಮೊದಲ ಐದು ವರ್ಷ ಅಧಿಕಾರ ನಡೆಸಿರುವ ಬಿಜೆಪಿಯು ಎರಡನೇ ಬಾರಿ ಅಧಿಕಾರದ ಆಸೆಗೆ ಹಿನ್ನಡೆಯಾದಂತಾಗಿದೆ.
ಜೆಡಿಎಸ್ 19 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಕಳೆದ ಬಾರಿ ಕೇವಲ 1 ಸ್ಥಾನ ಪಡೆದಿದ್ದು, ಸ್ಥಳೀಯ ಶಾಸಕದ ಸಾಧನೆಯ ಮೇಲೆ ಮತ ಕೇಳುತ್ತಿದ್ದು, 5-10 ಸ್ಥಾನದ ಜಯದ ನಿರೀಕ್ಷೆಯಲ್ಲಿದೆ.
ಕಾಂಗ್ರೆಸ್ 20 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿದ್ದು, 5ಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ಬಂಡಾಯ ಎದುರಿಸುತ್ತಿದ್ದು, ಹೆಚ್ಚಿನ ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ವಾರ್ಡ್ ವಿವರ:
ವಾರ್ಡ್ 1: ಕೃಷ್ಣನಾಯಕ (ಬಿಜೆಪಿ), ಜಿ.ಬಸವರಾಜ (ಕಾಂಗ್ರೆಸ್), ಮಂಜುನಾಥ (ಜೆಡಿಎಸ್), ಅಮರೇಶ( ಪಕ್ಷೇತರ).
ವಾರ್ಡ್ 2: ಜಬೀನಾ ಬೇಗಂ (ಕಾಂಗ್ರೆಸ್), ಖಾಜಮ್ಮ (ಜೆಡಿಎಸ್).
ವಾರ್ಡ್ 3: ಹಸನ್ ಸಾಬ್(ಕಾಂಗ್ರೆಸ್) ಇರ್ಫಾನ್ (ಪಕ್ಷೇತರ).
ವಾರ್ಡ್ 4: ಉಮಾದೇವಿ ಶಂಕರಗೌಡ(ಬಿಜೆಪಿ), ಅಮರಮ್ಮ ವೀರಭದ್ರಪ್ಪ (ಕಾಂಗ್ರೆಸ್), ರಂಜಾನ್ ಬೀ (ಜೆಡಿಎಸ್).
ವಾರ್ಡ್ 5: ಲಕ್ಷ್ಮಿ ಆದೆಪ್ಪ (ಬಿಜೆಪಿ), ಶೈಲಜಾ ಉಮಾಶಂಕರ (ಕಾಂಗ್ರೆಸ್), ಲಕ್ಷ್ಮಿ ಉಮಾಪತಿ (ಜೆಡಿಎಸ್), ಅಂಜಲಿ ಪಿ.ಹನುಮಂತ (ಪಕ್ಷೇತರ).
ವಾರ್ಡ್ 6: ಹಾಜಿ ಅಬ್ದುಲ್ ಸಾಬ್ (ಕಾಂಗ್ರೆಸ್), ಮೌಲಸಾಬ (ಜೆಡಿಎಸ್).
ವಾರ್ಡ್ 7: ಶಕೀಲಾ ಬೇಗಂ ಮಹ್ಮದ್ ಖಾಜಾ(ಬಿಜೆಪಿ), ಲಲಿತಮ್ಮ ಯಲ್ಲಪ್ಪ (ಕಾಂಗ್ರೆಸ್), ಪುತ್ರಮ್ಮ ರಾಜಪ್ಪ (ಜೆಡಿಎಸ್), ಮಲ್ಲಮ್ಮ ಶರಣಪ್ಪ (ಪಕ್ಷೇತರ), ರೇಣುಕಾ ಕರಿಯಪ್ಪ (ಪಕ್ಷೇತರ), ಸುಮಂಗಲಾ ಪರಮೇಶ (ಪಕ್ಷೇತರ).
ವಾರ್ಡ್ 8: ತಾಯಪ್ಪ (ಬಿಜೆಪಿ), ಮಲ್ಲಪ್ಪ (ಕಾಂಗ್ರೆಸ್), ಶಿವಪ್ಪ (ಜೆಡಿಎಸ್), ಮಲ್ಲಿಕಾರ್ಜುನ (ಪಕ್ಷೇತರ), ಮಾರ್ತಾಂಡಪ್ಪ (ಪಕ್ಷೇತರ), ಹನುಮೇಶ (ಪಕ್ಷೇತರ).
ವಾರ್ಡ್ 9: ರಮೇಶ ನಾಯಕ (ಬಿಜೆಪಿ), ಸೂರಿ ದುರುಗಣ್ಣ (ಕಾಂಗ್ರೆಸ್), ರಮೇಶ ದೊರೆ(ಜೆಡಿಎಸ್).
ವಾರ್ಡ್ 10: ರೇಣುಕಾ ಉಡುದಯ್ಯ(ಬಿಜೆಪಿ), ಹನುಮಂತಿ ಹನುಮಂತ (ಕಾಂಗ್ರೆಸ್), ಉಮಾದೇವಿ ಬಸವರಾಜ (ಜೆಡಿಎಸ್).
ವಾರ್ಡ್ 11: ಗಂಗಾಧರಯ್ಯ ಸ್ವಾಮಿ (ಬಿಜೆಪಿ), ಶರಣಬಸವ (ಕಾಂಗ್ರೆಸ್), ಮಲ್ಲಿಕಾರ್ಜುನ (ಜೆಡಿಎಸ್).
ವಾರ್ಡ್ 12: ಅಮರಮ್ಮ ಶರಣಪ್ಪಗೌಡ (ಕಾಂಗ್ರೆಸ್), ರುಕ್ಸಾನ ಸುಲ್ತಾನ್ (ಜೆಡಿಎಸ್).
ವಾರ್ಡ್ 13: ಚಂದಮ್ಮ ಭೀಮಪ್ಪ (ಬಿಜೆಪಿ), ರಾಜಮ್ಮ ಪ್ರೇಮಕುಮಾರ (ಕಾಂಗ್ರೆಸ್), ನಾಗಮ್ಮ ಹನುಮಂತ (ಜೆಡಿಎಸ್), ವಿಜಯಲಕ್ಷ್ಮಿ(ಪಕ್ಷೇತರ).
ವಾರ್ಡ್ 14: ಅಜಿತ್ ಕುಮಾರ (ಬಿಜೆಪಿ), ಮೌನೇಶ (ಕಾಂಗ್ರೆಸ್), ಅರಳಪ್ಪ (ಜೆಡಿಎಸ್).
ವಾರ್ಡ್ 15: ಅಮರೇಶ ಶಿವರಾಯ (ಬಿಜೆಪಿ), ಹನುಮೇಶ ತಿಮ್ಮಪ್ಪ (ಕಾಂಗ್ರೆಸ್), ರಾಜು (ಜೆಡಿಎಸ್), ಭೀಮೇಶ (ಪಕ್ಷೇತರ), ಚಿದಾನಂದ (ಪಕ್ಷೇತರ).
ವಾರ್ಡ್ 16: ಎಚ್.ಕೆ.ಕರಿಯಪ್ಪ (ಬಿಜೆಪಿ), ಎಂ.ಡಿ.ಮೌಲಸಾಬ್ (ಕಾಂಗ್ರೆಸ್), ರಾಮಸ್ವಾಮಿ (ಜೆಡಿಎಸ್), ಮಹ್ಮದ್ ವಲಿ (ಪಕ್ಷೇತರ)
ವಾರ್ಡ್ 17: ಸುರೇಶ ರೆಡ್ಡಿ (ಬಿಜೆಪಿ), ಚನ್ನಪ್ಪ (ಕಾಂಗ್ರೆಸ್), ದೇವರಾಜ (ಜೆಡಿಎಸ್), ಗೋವಿಂದಪ್ಪ (ಪಕ್ಷೇತರ), ಮಲ್ಲಿಕಾರ್ಜುನ ಮಡ್ಡಿ(ಪಕ್ಷೇತರ).
ವಾರ್ಡ್ 18: ಸಂದೀಪ ಪಾಟೀಲ್ (ಬಿಜೆಪಿ), ಆದೇಶ (ಕಾಂಗ್ರೆಸ್), ಶಿವಶರಣಪ್ಪ (ಜೆಡಿಎಸ್), ಅಬ್ದುಲ್ ರಶೀದ್ (ಪಕ್ಷೇತರ), ವಿಶ್ವನಾಥ (ಪಕ್ಷೇತರ).
ವಾರ್ಡ್ 19: ದೀನಮ್ಮ (ಕಾಂಗ್ರೆಸ್), ಸೋನಮ್ಮ ಪಿತಗಲ್ (ಜೆಡಿಎಸ್), ಮೋನಿಕಾ (ಪಕ್ಷೇತರ), ಹನುಮಂತಿ (ಪಕ್ಷೇತರ).
ವಾರ್ಡ್ 20: ಮಂಜುಳಾ ರಾಮಯ್ಯ (ಬಿಜೆಪಿ), ಶ್ರೀದೇವಿ ಮನೋಹರ (ಕಾಂಗ್ರೆಸ್), ಬಸ್ಸಮ್ಮ ಗ್ಯಾನಪ್ಪ (ಜೆಡಿಎಸ್) ಅಭ್ಯರ್ಥಿಗಳ ಚುನಾವಣಾ ಕಣದಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.