ADVERTISEMENT

ಶಕ್ತಿನಗರ | ಗೋಮಾಳಗಳಲ್ಲಿ ಹುಲ್ಲಿನ ಬೀಜ ಬಿತ್ತನೆ

ಭೂ ರಹಿತರಲ್ಲಿ ಮೂಡಿದ ಹೊಸ ಭರವಸೆ

ಉಮಾಪತಿ ಬಿ.ರಾಮೋಜಿ
Published 10 ಜುಲೈ 2024, 6:48 IST
Last Updated 10 ಜುಲೈ 2024, 6:48 IST
ಶಕ್ತಿನಗರ ಬಳಿಯ ಮಾಮನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆ ಯಡಿ ವಿತರಿಸಿರುವ ಮೇವಿನ ಬೀಜ ಬಿತ್ತನೆ ಮಾಡುತ್ತಿರುವ ರೈತರು.
ಶಕ್ತಿನಗರ ಬಳಿಯ ಮಾಮನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆ ಯಡಿ ವಿತರಿಸಿರುವ ಮೇವಿನ ಬೀಜ ಬಿತ್ತನೆ ಮಾಡುತ್ತಿರುವ ರೈತರು.   

ಶಕ್ತಿನಗರ: ರಾಯಚೂರು ತಾಲ್ಲೂಕಿನಲ್ಲಿ ಪಶುಪಾಲನೆಯಲ್ಲಿ ತೊಡಗಿಸಿಕೊಂಡ ಭೂ ರಹಿತರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇವಿನ ಬೀಜ ಬಿತ್ತನೆಗೆ ಅವಕಾಶ ನೀಡಿದ್ದು, ಹೊಸ ಭರವಸೆ ಮೂಡಿದಂತಾಗಿದೆ.

ಗ್ರಾಮೀಣ ಭೂ ರಹಿತರು ಪಶುಪಾಲನೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ, 2023-24ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಲ್ಲಿ 5 ಸಾವಿರ ಗೋಮಾಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದೆ.

ನರೇಗಾ ಯೋಜನೆ ಮೂಲಕ ಪಶುಸಂಗೋಪನೆ ಸಂರಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ ಮಟ್ಟದಲ್ಲಿ ಗೋಮಾಳ ಅಭಿವೃದ್ಧಿಗಾಗಿ ಗೋಮಾಳ ಅಂಚಿನ ಸುತ್ತಲು ಕಂದಕ ಬದು ನಿರ್ಮಾಣ, ಗೋಮಾಳದಲ್ಲಿ ಜಲಾನಯನ ಪರಿಕಲ್ಪನೆ ಅನುಷ್ಠಾನ, ಬಹುವಾರ್ಷಿಕ ಮೇವಿನ ಗಿಡಗಳು, ಹಣ್ಣಿನ ಗಿಡ ಬೆಳೆಸುವುದು, ಬಹು ವಾರ್ಷಿಕ ಹುಲ್ಲಿನ ಬೀಜಗಳ ಬಿತ್ತನೆ, ಜಾನುವಾರುಗಳಿಗೆ ನೀರಿನ ಲಭ್ಯತೆಗೆ ಗೋಕಟ್ಟೆ ನಿರ್ಮಾಣ ಮಾಡುವುದಾಗಿದೆ.

ADVERTISEMENT

ಈಗಾಗಲೇ ತಾಲೂಕಿನ ವಿವಿಧೆಡೆ ಮಳೆಯಾಗಿದ್ದು, ಗೋಮಾಳ ಪ್ರದೇಶದಲ್ಲಿ ಮಣ್ಣಿನಲ್ಲಿ ತೇವಾಂಶ ಇರುವುದರಿಂದ ವಿವಿಧ ತಳಿಯ ಮೇವಿನ, ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಅವುಗಳಲ್ಲಿ ಜೋಳದ ಬಹವಾರ್ಷಿಕ ಮೇವಿನ ಬೀಜ ಹಾಗೂ ಮೆಕ್ಕೆ ಜೋಳದ (ಅಫ್ರಿಕನ್ ಟಾಲ್ ಮೇಜ್) ಸಿಒಎಪ್ಎಸ್ 31 ಬಹುವಾರ್ಷಿಕ ಮೇವಿನ ಬೀಜಗಳನ್ನು ತಾಲೂಕಿನ ಮಾಡಮಾನದೊಡ್ಡಿ, ಗಟ್ಟು ಬಿಚಾಲಿ, ಹಂಚಿನಾಳ, ಗಾಣಧಾಳ ಸೇರಿದಂತೆ ಹಲವು ಗ್ರಾಮಗಳ ಗೋಮಾಳಗಳಲ್ಲಿ ಹುಲ್ಲಿನ ಬೀಜ ಬಿತ್ತುವ ಕಾರ್ಯ ಚುರಕಾಗಿ ನಡೆಯುತ್ತಿದೆ.

ಗ್ರಾ.ಪಂ ವ್ಯಾಪ್ತಿಯ ಗೋಮಾಳ ಪ್ರದೇಶದವನ್ನು ವಿವಿಧ ಅನುಷ್ಠಾನ(ಪಶುಸಂಗೋಪನೆ, ಅರಣ್ಯ, ಕೃಷಿ, ತೋಟಗಾರಿಕೆ ಮತ್ತು ಕಂದಾಯ) ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗಿರುತ್ತದೆ. ರಾಯಚೂರು ತಾಲೂಕಿನ ಆತ್ಕೂರು, ಬಿಚ್ಚಾಲಿ, ಬಿಜನಗೇರಾ, ಚಂದ್ರಬಂಡ, ಗಾಣಧಾಳ, ಎನ್. ಮಲ್ಕಾಪುರ, ಗಿಲ್ಲೇಸೂಗುರು, ಗುಂಜಳ್ಳಿ, ಹಿರಾಪೂರು, ಇಡಪನೂರು, ಜೇಗರಕಲ್, ಜಾ.ವೆಂಕಟಪೂರು, ಕಮಲಾಪುರು, ಎಲ್.ಕೆ.ದೊಡ್ಡಿ, ಮಮದಾಪುರ, ಮಿಟ್ಟಿಮಲ್ಕಾಪುರು, ಯದ್ಲಾಪುರು ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗೋಮಾಳ ಪ್ರದೇಶಗಳನ್ನು ಗುರುತಿಸಲಾಗಿದೆ.

ಖಾಲಿ ಇರುವ ಪ್ರದೇಶದಲ್ಲಿ ಭೂ ಕಬಳಿಕೆಯಡಿ ಒತ್ತುವರಿಯಾಗುವ ಚಿಂತೆಯಿಂದ ಮುಕ್ತವಾಗಲು ಸರ್ಕಾರ ಆಯವ್ಯಯದಲ್ಲಿ ಮಂಡಿಸಿದತೆ ಗೋಮಾಳ ಪ್ರದೇಶಗಳ ಸದ್ಬಳಕೆ ಮುಂದಾಗಿದ್ದು, ಅದರ ಭಾಗವಾಗಿ ಭೂಮಿಯಿಲ್ಲದೆ ಇರುವ ಪಶುಪಾಲನೆ ಮಾಡುವ ರೈತರಿಗೆ ಮೇವಿನ ಬೀಜ ಬಿತ್ತನೆ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವ ಈ ನಿರ್ಧಾರ ವರದಾನವಾಗಿದ್ದರೂ ಇಲಾಖೆಗಳ ಸಮನ್ವಯತೆಯೂ ಸವಾಲಾಗಿದ್ದು ಎಷ್ಟರ ಮಟ್ಟಿಗೆ ಕಾರ್ಯಸಾಧುವಾಗಲಿದೆ ಎಂದು ಕಾದು ನೋಡಬೇಕಿದೆ.

ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಗೋಮಾಳ ಅಭಿವೃದ್ಧಿ ಮಾಡುವುದರಿಂದ ಭೂ ರಹಿತ ಕುಟುಂಬಗಳಿಗೆ ಪಶುಸಂಗೋಪನೆ ಉಪ ಕಸುಬುಗಳಾಗಿ ಸುಸ್ಥೀರ ಜೀವನ ಸಾಗಿಸಲು ಒಂದು ವರದಾನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಚಂದ್ರಶೇಖರ ಪವಾರ್ ಹೇಳಿದರು.

ನರೇಗಾ ಯೋಜನೆಯಡಿ ಹುಲ್ಲುಗಾವಲು ಅಭಿವೃದ್ಧಿ ಪಡಿಸುವುದರಿಂದ ಪಶು ಸಂಗೋಪನೆಗೆ ಉತ್ತೇಜನ ನೀಡಿ, ಸುಸ್ಥಿರ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ನರೇಗಾ ಯೋಜನೆಯ ತಾಲ್ಲೂಕಿನ ಸಹಾಯಕ ನಿರ್ದೇಶಕ ಹನುಮಂತ ಹೇಳಿದರು.

ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಅದರಿಂದ ಭೂ ರಹಿತ ಕುಟುಂಬಗಳಿಗೆ ಪಶುಸಂಗೋಪನೆ ಉಪ ಕಸುಬಾಗಿಸಿಕೊಂಡು ಸುಸ್ಥಿರ ಜೀವನ ಸಾಗಿಸಲು ನೆರವಾಗಲಿದೆ.
ಚಂದ್ರಶೇಖರ ಪವಾರ, ತಾ.ಪಂ.ಇಒ ರಾಯಚೂರು
ನರೇಗಾದಡಿ ಹುಲ್ಲುಗಾವಲು ಅಭಿವೃದ್ಧಿ ಪಡಿಸುವುದರಿಂದ ಪಶು ಸಂಗೋಪನೆಗೆ ಉತ್ತೇಜನ ನೀಡಿ ಸುಸ್ಥಿರ ಬದುಕು ಕೊಟ್ಟಿಕೊಳ್ಳಲು ಅನುಕೂಲವಾಗಲಿದೆ.
ಹನುಮಂತ, ಸಹಾಯಕ ನಿರ್ದೇಶಕ ನರೇಗಾ ಯೋಜನೆ
ಶಕ್ತಿನಗರ ಬಳಿಯ ಮಾಮನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆ ಯಡಿ ವಿತರಿಸಿರುವ ಮೇವಿನ ಬೀಜ ಬಿತ್ತನೆ ಮಾಡುತ್ತಿರುವ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.