ADVERTISEMENT

ಮಸ್ಕಿ: ಹೆದ್ದಾರಿ ಮೇಲೆ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:26 IST
Last Updated 25 ಜುಲೈ 2024, 14:26 IST
ಮಸ್ಕಿ ಪಟ್ಟಣ ಒಳಗೆ ಬರುವ ವಾಹನಗಳ ವೇಗವನ್ನು ಪತ್ತೆ ಹಚ್ಚುವ ಕಾರ್ಯವನ್ನು ಗುರುವಾರ ಪಿಎಸ್ಐ ತಾರಾಭಾಯಿ ಪರಿಶೀಲಿಸಿದರು
ಮಸ್ಕಿ ಪಟ್ಟಣ ಒಳಗೆ ಬರುವ ವಾಹನಗಳ ವೇಗವನ್ನು ಪತ್ತೆ ಹಚ್ಚುವ ಕಾರ್ಯವನ್ನು ಗುರುವಾರ ಪಿಎಸ್ಐ ತಾರಾಭಾಯಿ ಪರಿಶೀಲಿಸಿದರು   

ಮಸ್ಕಿ: ಹೆದ್ದಾರಿ ಮೇಲೆ ಹೆಚ್ಚುತ್ತಿರುವ ಅಪಘಾತ ತಡೆಯಲು ಮುಂದಾಗಿರುವ ಸ್ಥಳೀಯ ಪೊಲೀಸ್ ಇಲಾಖೆ ವಾಹನಗಳ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಸುವ ಮೂಲಕ ವೇಗವಾಗಿ ಬರುವ ವಾಹನಗಳಿಗೆ ದಂಡ ಹಾಕಲು ಮುಂದಾಗಿದೆ.

ಪಟ್ಟಣದ ಲಿಂಗಸುಗೂರು ಹಾಗೂ ಸಿಂಧನೂರು ಕಡೆ ವಾರದಲ್ಲಿ ಮೂರು ದಿನದಂತೆ ಸರದಿ ಮೇಲೆ ಯಂತ್ರದೊಂದಿಗೆ ಹೆದ್ದಾರಿ ಮೇಲೆ ಬಿಡಾರ ಹೂಡುವ ಪೊಲೀಸರು ವೇಗವಾಗಿ ಬರುವ ಬೈಕ್, ಟ್ರಕ್, ಬಸ್, ಲಾರಿ ಸೇರಿದಂತೆ ವಾಹನಗಳ ವೇಗವನ್ನು ಯಂತ್ರದಲ್ಲಿ ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು ಎಂದು ಸಬ್ ಇನ್‌ಸ್ಪೆಕ್ಟರ್ ತಾರಾಭಾಯಿ ತಿಳಿಸಿದ್ದಾರೆ.

ವೇಗವಾಗಿ ವಾಹನಗಳು ಪಟ್ಟಣದ ಚಲಾಯಿಸುತ್ತಿದ್ದರಿಂದ ಇತ್ತೀಚಿಗೆ ಅಪಘಾತಗಳು ಹೆಚ್ಚಾಗಿವೆ. ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಜೀವ ಭಯದಲ್ಲಿ ರಸ್ತೆ ದಾಟುವ ಪರಿಸ್ಥಿತಿ ಬಂದಿದೆ. ವಾಹನಗಳಿಗೆ ವೇಗದ ಕಡಿವಾಣ ಹಾಕಿದರೆ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಪೊಲೀಸರು ಸರದಿ ಮೇಲೆ ರಸ್ತೆ ಮೇಲೆ ಗಸ್ತು ಕಾಯುತ್ತಿದ್ದು ವೇಗವಾಗಿ ಬರುವ ವಾಹನಗಳನ್ನು ಯಂತ್ರದ ಮೂಲಕ ಪತ್ತೆ ಹಚ್ಚಿ ಸ್ಥಳದಲ್ಲಿಯೇ ದಂಡ ಹಾಕಿ ಕಳಿಸಲಾಗುತ್ತಿದೆ ಎಂದರು. ವಾಹನ ಸವಾರರು ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.