ಜಾಲಹಳ್ಳಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿಯೇ ಬಿಡಾಡಿ ಜಾನುವಾರುಗಳು ಬಿಡು ಬಿಟ್ಟಿರುವುದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಆರು ತಿಂಗಳಿಂದ ನಿರಂತರವಾಗಿ ಜಾನುವಾರುಗಳು ರಾಜ್ಯ ಹೆದ್ದಾರಿಯ ಮಧ್ಯೆದಲ್ಲಿಯೇ ನಿಲ್ಲುವುದರಿಂದ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗಿದೆ. ಸ್ಥಳೀಯ ಕೆಲವರು ತಮ್ಮ ಜಾನುವಾರುಗಳನ್ನು ಕಾಯದೇ ಹಾಗೂ ಕಟ್ಟಿ ಹಾಕದೇ ಬೀದಿಗೆ ಬಿಟ್ಟಿರುವುದರಿಂದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ನಿತ್ಯ ಪರಾದಡುವಂತಾಗಿದೆ.
’ಸಂಜೆ ಹಾಗೂ ಮುಂಜಾನೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತವೆ. 100ಕ್ಕೂ ಹೆಚ್ಚು ಜಾನುವಾರುಗಳು ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡಾಡಿ ದನಗಳು ರಸ್ತೆಯಲ್ಲಿ ಇರುವುದರಿಂದ ಪಟ್ಟಣದಲ್ಲಿ ಅಪಘಾತ ಗಳ ಸಂಖ್ಯೆ ಹೆಚ್ಚಾಗಿವೆ. ದನಗಳು ರಸ್ತೆ ಮಧ್ಯದಲ್ಲಿಯೇ ಇರುವುದರಿಂದ ಈಗಾಗಲೇ ಅನೇಕರು ಬೈಕ್ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ತಕ್ಷಣವೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬಿಡಾಡಿ ದನಗಳನ್ನು ತೆರವುಗೊಳಿಸಿ ಸಾರ್ವಜನಿಕರ ಜೀವ ಉಳಿಸಬೇಕು ಎಂದು ಚಾಲಕ ರಂಗಪ್ಪ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.