ಜಾಲಹಳ್ಳಿ: ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಕಲ್ಮಾಲ-ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿಯಲ್ಲಿಯೇ ದನಗಳು ಸೇರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
‘ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ಅಂಬೇಡ್ಕರ್ ವೃತ್ತದ ಬಳಿ ನಿತ್ಯಸಂಜೆಯಾದರೆ ಸಾಕು ದನಗಳು ಠಿಕಾಣಿ ಹೂಡುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಚಾಲಕ ರಂಗಪ್ಪ ಆರೋಪಿಸಿದ್ದಾರೆ.
‘ಈ ಬೀಡಾಡಿ ದನಗಳು ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ವಿರಮಿಸುತ್ತವೆ. ವಾಹನ ಸವಾರರತ್ತ ಏಕಾಏಕಿ ನುಗ್ಗಿ ಬರುತ್ತವೆ. ಇದರಿಂದ ಗಾಬರಿಯಾಗಿ ಅಪಘಾತಗಳು ಹೆಚ್ಚುತ್ತಿವೆ. ಕೆಲವು ದನಗಳಿಗೆ ಮಾಲೀಕರಿದ್ದಾರೆ. ಅವರು ತಮ್ಮ ದನಗಳನ್ನು ರಸ್ತೆ ಬಿಡುತ್ತಿದ್ದಾರೆ’ ಎಂಬ ದೂರುಗಳೂ ಕೇಳಿ ಬಂದಿವೆ.
‘ಪಟ್ಟಣದಲ್ಲಿರುವ ಬೀಡಾಡಿ ದನಗಳನ್ನು ಹಿಡಿದು ರಾಯಚೂರು ನಗರದ ಗೋಶಾಲೆಗೆ ಸಾಗಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.