ADVERTISEMENT

‘ಪ್ರವಾದಿ ಮುಹಮ್ಮದ್ ಮಹಾನ್ ಮಾನವತಾವಾದಿ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:23 IST
Last Updated 24 ಸೆಪ್ಟೆಂಬರ್ 2024, 14:23 IST
ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಮಂಗಳವಾರ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹುಸೇನ್‍ಸಾಬ್ ಹಾಗೂ ಮಹಮ್ಮದ್ ಇಕ್ಬಾಲ್‍ಸಾಬ್ ಹಣಿಗಿಕಟ್ಟಿ ಅವರನ್ನು ಸನ್ಮಾನಿಸಲಾಯಿತು
ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಮಂಗಳವಾರ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹುಸೇನ್‍ಸಾಬ್ ಹಾಗೂ ಮಹಮ್ಮದ್ ಇಕ್ಬಾಲ್‍ಸಾಬ್ ಹಣಿಗಿಕಟ್ಟಿ ಅವರನ್ನು ಸನ್ಮಾನಿಸಲಾಯಿತು   

ಸಿಂಧನೂರು: ‘ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿದ್ದು, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹುಸೇನಸಾಬ್ ಹೇಳಿದರು.

ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಮಂಗಳವಾರ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರವಾದಿಯವರ ಜನ್ಮದಿನಾಚರಣೆ ನಿಮಿತ್ತ ‘ಪ್ರವಾದಿ ಮುಹಮ್ಮದರು ಮಹಾನ್ ಚಾರಿತ್ರ್ಯವಂತ’ ಎಂಬ ಘೋಷವಾಕ್ಯದೊಂದಿಗೆ ತಾಲ್ಲೂಕು ಸೇರಿ ರಾಜ್ಯಾದಾದ್ಯಂತ ತಿಂಗಳ ಪರ್ಯಂತ ಅಭಿಯಾನ ನಡೆಸುವ ಮೂಲಕ ಅವರು ಸಾರಿದ ತತ್ವ ಸಂದೇಶಗಳನ್ನು ಜನರಿಗೆ ತಿಳಿಸಿ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಪ್ರವಾದಿ ಪೈಗಂಬರ್, ಬುದ್ಧ, ಬಸವಣ್ಣ, ಅಂಬೇಡ್ಕರ್, ಕನಕದಾಸರು ಹೀಗೆ ಎಲ್ಲ ದಾರ್ಶನಿಕರು ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನೇ ಪ್ರತಿಪಾದಿಸಿದ್ದಾರೆ. ಅವರ ವಿಚಾರಧಾರೆಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹುಸೇನ್‍ಸಾಬ್ ಹಾಗೂ ಮಹಮ್ಮದ್ ಇಕ್ಬಾಲ್‍ಸಾಬ್ ಹಣಿಗಿಕಟ್ಟಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.

ಮುಖಂಡರಾದ ಡಾ.ವಸೀಂ ಅಹ್ಮದ್, ಡಾ.ಮನ್ಸೂರ್, ಮೌಲಾನಾ ರಾಜಾಹುಸೇನ್, ಯಾಸಿನ್ ಮುಲ್ಲಾ, ಯಾಕೂಬ್ ಅಲಿ, ಅಬ್ಲಾಯ್ಸ್ ನಾಯಕ್, ಹುಸೇನ್ ಮದೀನಾ, ಮಹಮ್ಮದ್ ತಾಯರ್, ಆಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹಿರೇಮಠ, ಸಿಬ್ಬಂದಿ ಸುಜಾತ ಹಿರೇಮಠ, ಮರಿಯಪ್ಪ, ಶರಣಮ್ಮ ಹಾಗೂ ಹರ್ಷವರ್ಧನ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.