ADVERTISEMENT

ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಮೂರು ವರ್ಷದ ಪುಟಾಣಿ ನಿಧಿಶ್ರೀ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 4:43 IST
Last Updated 11 ಫೆಬ್ರುವರಿ 2023, 4:43 IST
ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಕಟಿಸಿದ 2022 ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಮಸ್ಕಿ ಪಟ್ಟಣದ ನಿಧಿಶ್ರೀ
ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಕಟಿಸಿದ 2022 ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಮಸ್ಕಿ ಪಟ್ಟಣದ ನಿಧಿಶ್ರೀ   

ಮಸ್ಕಿ: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ ಸಾಧಕರ ಪಟ್ಟಿಗೆ ಪಟ್ಟಣದ ಮೂರು ವರ್ಷದ ಪುಟಾಣಿ ನಿಧಿಶ್ರೀ ಆಯ್ಕೆಯಾಗಿದ್ದಾಳೆ.

ನಿಧಿಶ್ರೀ ಪಟ್ಟಣದ ಬಸನಗೌಡ ಪೊಲೀಸ್ ಪಾಟೀಲ್ ಅವರ ಮೊಮ್ಮಗಳು.

ಪದ ಚಿನ್ಹೆಮ ಇಂಡಿಯಾ ಬುಕ್ ಆಪ್ ರೆಕಾರ್ಡ್ ಸಂಸ್ಥೆ ಪ್ರಕಟಿಸಿದ 2022ರ ಸಾಧಕರ ಪಟ್ಟಿಯಲ್ಲಿ ನಿಧಿಶ್ರೀ ಸ್ಥಾನ ಪಡೆದುಕೊಂಡಿದ್ದಾಳೆ.

ADVERTISEMENT

ಪದ,‌‌ ಚಿನ್ಹೆ ಹಾಗೂ ವಿವಿಧ ವಸ್ತುಗಳನ್ನು ಗುರುತಿಸಿ ಹೇಳುವ ಹಾಗೂ ಸಂಸ್ಕೃತ ಶ್ಲೋಕ, ಇಂಗ್ಲೀಷ್ ರೈಮ್ಸ್ ಪದ, ರಾಷ್ಟ್ರೀಯ ಚಿಹ್ನೆ, ವಾಹನ, ಪಕ್ಷಿ, ಪ್ರಾಣಿಗಳ, ವೃತ್ತಿ, ಅಂಕಿ-ಸಂಖ್ಯೆ ದೇಹದ ಅಂಗಾಂಗ, ವಿವಿಧ ಬಣ್ಣ, ಹಣ್ಣು ಮತ್ತು ತರಕಾರಿಗಳನ್ನು ಗುರುತಿಸಿ ಹೇಳುವ ಜ್ಞಾಪಕ ಶಕ್ತಿ ಇರುವ ಮಗುವಿನ ಎಲ್ಲಾ ಚಿತ್ರ, ವಿಡಿಯೋಗಳನ್ನು ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್‌ಗೆ ಕಳುಹಿಸಲಾಗಿತ್ತು.

ಇದನ್ನು ಪರಿಶೀಲಿಸಿದ ಸಂಸ್ಥೆಯು ಸಾಧಕರ ಪಟ್ಟಿಗೆ ಆಯ್ಕೆ ಮಾಡಿ ಪ್ರಮಾಣ ಪತ್ರ ಕಳಿಸಿದೆ ಎಂದು ಬಸನಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.