ರಾಯಚೂರು: ಸವಿತಾ ಸಮಾಜಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸವಿತಾ ಸಮಾಜ ಜಿಲ್ಲಾ ಘಟಕದ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಸವಿತಾ ಸಮಾಜದವರು 20 ಸಾವಿರಕ್ಕಿಂತ ಹೆಚ್ಚು ಇದ್ದಾರೆ. ಈ ಜನಾಂಗಕ್ಕೆ ಮೀಸಲಾದ ರುದ್ರಭೂಮಿ ಸರ್ಕಾರ ನೀಡಿಲ್ಲ. ಅದಕ್ಕೆ, ಜಲಾಲ್ ಸಾಬ್ ಬೆಟ್ಟದ ಹಿಂದೆ ಇರುವ ಸರ್ವೆ ಸಂಖ್ಯೆ 582ರ ಸರ್ಕಾರಿ ಜಾಗದಲ್ಲಿ ಐದು ಎಕರೆ ಸರ್ಕಾರಿ ಭೂಮಿ ಅಥವಾ ಬೇರೆ ಕಡೆ ಸರ್ಕಾರದ ಭೂಮಿಯನ್ನು ಸವಿತಾ ಸಮಾಜಕ್ಕೆ ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ.
ರಾಘವೇಂದ್ರ ಇಟಗಿ, ವಿ.ಗೋವಿಂದ, ಡಿ.ನಾಗರಾಜ, ಭೀಮೇಶ ಗುಂಜಹಳ್ಳಿ, ಎಸ್.ಅನಿಲ್ ಕುಮಾರ್, ಶ್ರೀನಿವಾಸ್, ವಿ.ಗೋಪಾಲ, ಈ ಅಂಜಿನೇಯ್ಯ, ಜಿ.ಭೀಮಣ್ಣ, ಈ.ಚಂದ್ರಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.