ADVERTISEMENT

‘ಪರಿಸರ ಸಂರಕ್ಷಣೆ ಎಲ್ಲರ ಹೊಣೆ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 15:14 IST
Last Updated 8 ಜೂನ್ 2024, 15:14 IST
ಲಿಂಗಸುಗೂರಿನ ಪಿಬಿಎ ಸೆಂಟ್ರಲ್ ಸ್ಕೂಲ್‌ ಆವರಣದಲ್ಲಿ ಸಸಿ ನೆಡಲಾಯಿತು
ಲಿಂಗಸುಗೂರಿನ ಪಿಬಿಎ ಸೆಂಟ್ರಲ್ ಸ್ಕೂಲ್‌ ಆವರಣದಲ್ಲಿ ಸಸಿ ನೆಡಲಾಯಿತು   

ಲಿಂಗಸುಗೂರು: ‘ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಗಿಡ–ಮರಗಳನ್ನು ಬೆಳೆಸುವ ಹೊಣೆಗಾರಿಕೆ ನಮ್ಮಗಳ ಮೇಲಿದೆ. ಅರಣ್ಯ ನಾಶಪಡಿಸುತ್ತ ಹೋದರೆ ಭವಿಷ್ಯದಲ್ಲಿ ಜೀವ ಸಂಕುಲ ಉಸಿರಾಟಕ್ಕೆ ನಿತ್ಯ ಆಕ್ಸಿಜನ್‍ ಸಿಲೆಂಡರ್ ಬಳಸುವುದು ಅನಿವಾರ್ಯವಾಗಲಿದೆ’ ಎಂದು ಪಿಬಿಎ ಸೆಂಟ್ರಲ್‍ ಸ್ಕೂಲ್‍ ಆಡಳಿತಾಧಿಕಾರಿ ಸುಷ್ಮಾ ಅಬ್ಬಿಗೇರಿ ಹೇಳಿದರು.

ಪಾಟೀಲ ಬಯ್ಯಾಪುರ ಅಮರೇಗೌಡ ಸೆಂಟ್ರಲ್‍ ಸ್ಕೂಲ್‌ನಲ್ಲಿ ಶನಿವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ‘ಗಿಡ–ಮರ ಬೆಳೆಸುವ ಅಭಿರುಚಿ ಕ್ಷೀಣಿಸುತ್ತ ಸಾಗಿದೆ. ಅಭಿವೃದ್ಧಿ ಹೆಸರಲ್ಲಿ ಇರುವ ಮರಗಳ ಮಾರಣ ಹೋಮ ನಡೆಯುತ್ತಿದ್ದು, ಪರಿಸರದಲ್ಲಿ ಆಕ್ಸಿಜನ್‍ ಕೊರತೆ ಆಗಲಿದೆ. ಹಸಿರು ಉಳಿಸಿ ಬೆಳೆಸಿದರೆ ಉಸಿರಾಟ ಸುಲಭ ಸಾಧ್ಯ ಎಂಬುದನ್ನು ಮಕ್ಕಳು ಮನಗಾಣಬೇಕು’ ಎಂದರು.

ಪ್ರಾಚಾರ್ಯ ಜೇಮ್ಸ್‌ ಮಾತನಾಡಿದರು.

ADVERTISEMENT

ಶಿಕ್ಷಕರಾದ ಮಾರನ್‍, ಗಂಗಾಧರ, ರವೀಂದ್ರ, ವೆಂಕಟೇಶ, ಕವಿತಾ, ಅನುಷಾ ಸೇರಿದಂತೆ ಮಕ್ಕಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.