ಹಟ್ಟಿಚಿನ್ನದಗಣಿ: ‘ವಿಶ್ವಕ್ಕೆ ರಾಮನ ಪರಿಚಯ ಮಾಡಿದ್ದು ಮಹರ್ಷಿ ವಾಲ್ಮೀಕಿ ಅವರು. ರಾಮಾಯಣ ಗ್ರಂಥವನ್ನು ಬರಿಯದಿದ್ದರೆ ರಾಮನ ಪರಿಚಯವೇ ಇರುತ್ತಿರಲಿಲ್ಲ’ ಎಂದು ಕಾರ್ಮಿಕ ಮುಖಂಡ ಮೌನುದ್ದಿನ್ ಹೇಳಿದರು.
ಹಟ್ಟಿ ಪಟ್ಟಣದ ಹಳೆ ಸಿನಿಮಾ ಟಾಕೀಸ್ ಹತ್ತಿರ ಇರುವ ವಾಲ್ಮೀಕಿ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರುನಾಡ ವಿಜಯ ಸೇನೆ ಜಿಲ್ಲಾ ಉಪಾಧ್ಯಕ್ಷ ಎಂ.ಸಿ.ಚಂದ್ರಶೇಖರ ನಾಯಕ ಮಾತನಾಡಿದರು.
ತಾ.ಪಂ ಮಾಜಿ ಸದಸ್ಯ ಎಂ.ನಿಂಗರಾಜ ಮಾತನಾಡಿ, ‘ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹5 ಲಕ್ಷ ಬಿಡುಗಡೆಯಾಗಿದೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದಾಗ ಅನುದಾನ ಇಲಾಖೆಯಲ್ಲಿ ಉಳಿದಿದೆ. ಈಗ ಹಟ್ಟಿ ಪಟ್ಟಣ ಪಂಚಾಯಿತಿಯಾಗಿದ್ದು ವಾಲ್ಮೀಕಿ ಭವನ ನಿರ್ಮಾಣಕ್ಕೆ ₹50 ಲಕ್ಷ ಹಣ ದೊರೆಯಲಿದ್ದು ಇದನ್ನು ವಾಲ್ಮೀಕಿ ಸಂಘದ ಪದಾಧಿಕಾರಿಗಳು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಕಾರ್ಮಿಕ ಮುಖಂಡ ಚಂದ್ರಶೇಖರ, ಹನುಮಂತರೆಡ್ಡಿ ಮಾತನಾಡಿದರು.
ಈ ವೇಳೆ ಮುಖಂಡರಾದ ದಾಸಪ್ಪಗೌಡ, ಎಂ.ಶಫೀ, ಕನಕರಾಜಗೌಡ ಗುರಿಕಾರ, ಯಂಕೋಬ ಮಿಯ್ಯಾಪೂರ, ಸೋಮಣ್ಣ ನಾಯಕ, ಮಾಸ್ಟರ್ ಗುಂಡಪ್ಪ ಗೌಡ, ಸಿದ್ದಪ್ಪ ಮುಂಡರಗಿ, ಬುಜ್ಜ ನಾಯಕ, ಬಸವರಾಜ ಪೈ, ಶಂಕರಗೌಡ ಬಳಗಾನೂರು, ಎನ್ ಸ್ವಾಮಿ, ,ರಂಗನಾಥ ಮುಂಡರಗಿ, ಯಕೊಂಬ, ರಮೇಶ ಉಳಿಮೇಶ್ವರ, ವಾಲ್ಮೀಕಿ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಧಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.