ಮಾನ್ವಿ: ‘ಅಳವಿನಂಚಿನಲ್ಲಿರುವ ಪ್ರಾಣಿ ಹಾಗೂ ಪಕ್ಷಿಗಳ ಸಂಕುಲದ ಉಳಿವು ಅಗತ್ಯ’ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭಾನುವಾರ ಪಟ್ಟಣದ ಕಲ್ಮಠದ ಧ್ಯಾನ ಮಂದಿರದ ಆವರಣದಲ್ಲಿ ಪಕ್ಷಿ ಪ್ರೇಮಿ ಸಲಾವುದ್ದೀನ್ ಗುತ್ತೇದಾರ ಹಾಗೂ ಗೆಳೆಯರ ಬಳಗ ಹಮ್ಮಿಕೊಂಡಿದ್ದ ‘ವಿಶ್ವ ಗುಬ್ಬಚ್ಚಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಪಕ್ಷಿಗಳ ಅನುಕೂಲಕ್ಕಾಗಿ ಸಲಾವುದ್ದೀನ್ ಗುತ್ತೇದಾರ ಅವರು ತಯಾರಿಸಿರುವ ಕೃತಕ ಗೂಡುಗಳು ಹಾಗೂ ವಾಟರ್ ಫೀಡರ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ಕಲ್ಮಠದ ವತಿಯಿಂದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಅವರು ಸಲಾವುದ್ದೀನ್ ಗುತ್ತೇದಾರ ಹಾಗೂ ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಅವರನ್ನು ಸನ್ಮಾನಿಸಿದರು.
ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ಉಪನ್ಯಾಸಕ ರಮೇಶಬಾಬು ಯಾಳಗಿ, ಛಾಯಾಗ್ರಾಹಕ ಜಗನ್ನಾಥ ಚೌದರಿ, ವನಸಿರಿ ಫೌಂಡೇಶನ್ ತಾಲ್ಲೂಕು ಅಧ್ಯಕ್ಷ ಶರಣಬಸವ ಭೋವಿ ಹಿರೇಕೊಟ್ನೇಕಲ್, ಉಪಾಧ್ಯಕ್ಷ ಬಸವರಾಜ ನಸಲಾಪುರ, ರಾಘವೇಂದ್ರ ಬದಿ, ರಾಘವೇಂದ್ರ ದಾನಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.