ADVERTISEMENT

ಯರಗೇರಾ ಬಡೇಸಾಬ್ ಉರುಸ್: ಗಂಧದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 15:36 IST
Last Updated 22 ಜನವರಿ 2024, 15:36 IST
ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದ ಸರ್ವ ಧರ್ಮ ಸಂಕೇತ ಹಜರತ್ ಬಡೇಸಾಬ್ ಉರುಸ್ ಅಂಗವಾಗಿ ಫಾತೆಹಾ (ಪ್ರಾರ್ಥನೆ) ನಡೆಯಿತು
ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದ ಸರ್ವ ಧರ್ಮ ಸಂಕೇತ ಹಜರತ್ ಬಡೇಸಾಬ್ ಉರುಸ್ ಅಂಗವಾಗಿ ಫಾತೆಹಾ (ಪ್ರಾರ್ಥನೆ) ನಡೆಯಿತು   

ರಾಯಚೂರು: ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಸಂಕೇತ ಹಜರತ್ ಬಡೇಸಾಬ್ ಉರುಸ್ ಅಂಗವಾಗಿ ಗಂಧದ ಮೆರವಣಿಗೆ ನಡೆಯಿತು.

ಮೆರವಣಿಗೆಯು ದರ್ಗಾದ ಸಜ್ಜಾದೆ ಸೈಯದ್ ಹಪೀಜುಲ್ಲಾ ಖಾದ್ರಿ ಮನೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದರ್ಗಾ ತಲುಪಿತು.

ಸೈಯದ್ ಫಜಲುಲ್ಲಾ ಫಾತೆಹಾ ನೆರವೇರಿಸಿದರು. ನಾಡಿನ ಶಾಂತಿ ನೆಮ್ಮದಿಗೆ ಪ್ರಾರ್ಥನೆ ಮಾಡಿದರು. ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು. ಗಂಧದ ಮೆರವಣಿಗೆಯಲ್ಲಿ ಮಕ್ಕಳ ಹಾಗೂ ಯುವಕರ ಗ್ರಾಮೀಣ ಕೋಲಾಟ ಜನರ ಮನಸೆಳೆಯಿತು.

ADVERTISEMENT

ದುರ್ಗಾ ಸಮಿತಿಯ ಅಧ್ಯಕ್ಷ ಮೆಹಬೂಬ್ ಪಟೇಲ್, ಕಾರ್ಯದರ್ಶಿ ಮಹಮ್ಮದ್ ನಿಜಾಮುದ್ದೀನ್, ಗ್ರಾಮದ ಮುಖಂಡರಾದ ಹರಿಶ್ಚಂದ್ರ ರೆಡ್ಡಿ, ಜನಾರ್ದನ ರೆಡ್ಡಿ, ವಿದ್ಯಾನಂದ ರೆಡ್ಡಿ, ಎನ್.ವೆಂಕಟರಾಮ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ರಾಕೇಶ್ ಗೌಡ, ವಿಷ್ಣುವರ್ಧನ ರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಫಾರೂಕ್, ಪಂಚಾಯಿತಿ ಸದಸ್ಯರಾದ ಎಂ.ನಾರಾಯಣ ಕೃಷ್ಣಜಿ, ಮಹಾದೇವ, ಫಕ್ರುದ್ದೀನ್ ಹಾಗೂ ಖಾಜಾ ಹುಸೇನ್ ಉಪಸ್ಥಿತರಿದ್ದರು.

ಭಾನುವಾರ ಸಂಸದ ರಾಜಾ ಅಮರೇಶ್ವರ ನಾಯಕ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಮಾತನಾಡಿ,‘ ಹಜರತ್‌‌ ಬಡೇಸಾಬ್ ದರ್ಗ ಪುರಾತನ ದರ್ಗವಾಗಿದ್ದು, ಸರ್ವ ಧರ್ಮಗಳ ಸಂಕೇತವಾಗಿ ಉರುಸ್ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.