ಬಿಡದಿ: ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಬಿಡದಿ ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಮುಂದೆಯೇ ತೆರೆದ ಚರಂಡಿ ಇದೆ. ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು, ಕಾರ್ಖಾನೆಗಳಿಗೆ ಕಾರ್ಮಿಕರು ಹಾಗೂ ಬೈರಮಂಗಲ ಮತ್ತು ಹಾರೋಹಳ್ಳಿಗೆ ಪ್ರಯಾಣಿಕರು ಇಲ್ಲಿಂದಲೇ ತೆರಳಬೇಕು.
ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿತ್ತು. ಅದನ್ನು ಸರಿಪಡಿಸಲು ಪುರಸಭೆಯಿಂದ ಅಗೆಯಲಾಗಿದೆ. ಆದರೆ ಕಳೆದ ಹತ್ತು ದಿನ ಕಳೆದರೂ ಚರಂಡಿಯ ಮೇಲೆ ಸ್ಲ್ಯಾಬ್ ಮುಚ್ಚದೇ ಹಾಗೂ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಇದೇ ಸ್ಥಳದಲ್ಲಿ ಬಸ್‌ಗಾಗಿ ಕಾಯುವ ಜನ ಮಳೆ ನೀರು ಚರಂಡಿ ತುಂಬಿ ಹರಿದು ಅವಘಡವಾದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡುತ್ತಾರೆ. ಇಪ್ಪತ್ತು ದಿನಗಳಿಂದ ಈ ಚರಂಡಿ ರಿಪೇರಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಇದು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ ಎನ್ನುತ್ತಾರೆ ಕಿರಣ್.
ಚರಂಡಿ ಮುಚ್ಚಿಸಲು ಸ್ಲಾಬ್ ಬರಬೇಕಾಗಿದೆ. ಬಂದ ಕೂಡಲೇ ಮುಚ್ಚಿಸುವ ಕೆಲಸ ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.