ರಾಮನಗರ: ರೈತರೊಬ್ಬರು ತಾಲ್ಲೂಕಿನ ಬನ್ನಿಕುಪ್ಪೆ (ಬಿ) ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಿಕ್ಕಣ್ಣ ಎಂಬುವರ ಮೇಲೆ ಹಾಲು ಸುರಿದು ಹಲ್ಲೆ ನಡೆಸಿದ್ದನ್ನು ಖಂಡಿಸಿ, ರಾಮನಗರ ತಾಲ್ಲೂಕು ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕೆಂಪೇಗೌಡ ವೃತ್ತದ ಬಳಿ ಇರುವ ಬಮೂಲ್ ಶಿಬಿರ ಕಚೇರಿ ಮುಂದೆ ಮಧ್ಯಾಹ್ನ ಜಮಾಯಿಸಿದ ಅಧಿಕಾರಿಗಳು, ತಮಗೆ ರಕ್ಷಣೆ ನೀಡುವಂತೆ ಘೋಷಣೆಗಳನ್ನು ಕೂಗಿದರು. ಹಲ್ಲೆ ನಡೆಸಿದ ರೈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ಅ. 4ರಂದು ಸಂಜೆ ರೈತ ಚಂದ್ರಶೇಖರ್ ಮತ್ತು ಅವರ ಪತ್ನಿ ರಶ್ಮಿ ಅವರು ತಂದಿದ್ದ ಹಾಲನ್ನು ಪರೀಕ್ಷಿಸಿದ ಒಕ್ಕೂಟದ ಹಾಲು ಪರಿವೀಕ್ಷಕರು,
ಹಾಲಿನಲ್ಲಿ ನೀರಿನ ಅಂಶ ಇರುವುದಾಗಿ ತಿಳಿಸಿ, ವಾಪಸ್ಸು ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಆಗ ದಂಪತಿ ಪರಿವೀಕ್ಷಕರೊಂದಿಗೆ ವಾಗ್ವಾದ ನಡೆಸಿದರು. ಏನೆಂದು ವಿಚಾರಿಸಿದ ನನ್ನ ಮೇಲೆ ಚಂದ್ರಶೇಖರ್ ಅವರು ಹಾಲು ಸುರಿದು ಹಲ್ಲೆ ನಡೆಸಿದರು. ಹಾಗಾಗಿ, ನನಗೆ ನ್ಯಾಯ ಬೇಕು’ ಎಂದು ಡೇರಿ ಸಿಇಒ ಚಿಕ್ಕಣ್ಣ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ವೀರಭದ್ರಯ್ಯ (ಗುಂಡಪ್ಪ), ಕಾರ್ಯದರ್ಶಿ ಡೈರಿ ವೆಂಕಟೇಶ್, ಸದಸ್ಯರಾದ ಕುರುಬರಹಳ್ಳಿದೊಡ್ಡಿ ಪ್ರಕಾಶ್, ಪ್ರಭಾಕರ್, ಮಹದೇವಯ್ಯ, ರೇಣುಕಾ, ಅರ್ಕೇಶ್, ಮಹೇಶ್, ಕಿರಣ್, ಉಮೇಶ್, ಶಿವರಾಜು, ಕುಮಾರ್, ಸೋಮಣ್ಣ, ದೇವರಾಜು, ರುದ್ರಯ್ಯ, ದಿವಾಕರ್, ಶಿವನಂಜಯ್ಯ ಪುಟ್ಟಸ್ವಾಮಿ, ಪ್ರಕಾಶ್, ಯೋಗಾನಂದ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.