ಮಾಗಡಿ: ಕಳೆದ ನಾಲ್ಕು ದಶಕಗಳಿಂದ ಬೇಸಾಯದೊಂದಿಗೆ ಜಾನಪದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತ, ಕಲಾವಿದ ರಂಗಯ್ಯ ಅವರಿಗೆ 2023ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಹೊಲದಲ್ಲಿ ಉತ್ತಿ ಬೆಳೆಯುತ್ತಾ ಜನರಿಗೆ ಅನ್ನ ನೀಡುವ ಜತೆಗೆ ಜಾನಪದ ಸೊಬಗವನ್ನು ಉಣ ಬಡಿಸುತ್ತಿರುವ ಅವರ 39 ವರ್ಷದ ಜಾನಪದ ಕೃಷಿಯನ್ನು ಪರಿಗಣಿಸಿ ಸರ್ಕಾರ ಪ್ರಶಸ್ತಿ ಘೋಷಿಸಿದೆ.
ಕರ್ನಾಟಕ ಜಾನಪದ ಅಕಾಡೆಮಿ ಸೋಮವಾರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ತಾಲ್ಲೂಕಿನ ತೂಬಿನಕೆರೆ ಗ್ರಾಮದ ಜಾನಪದ ಕಲಾವಿದ ರಂಗಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೇಸಾಯದಿಂದ ಪಟ ಕುಣಿತ, ಕೋಲಾಟ, ಸೋಮನ ಕುಣಿತದಲ್ಲಿ ಪ್ರವೀಣ್ಯ ಗಳಿಸಿರುವ ಅವರು ರಾಜ್ಯ ವಿವಿಧ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಲ್ಲಿ ಜಾನಪದ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
66 ವರ್ಷದ ರಂಗಯ್ಯ ಅವರು 27ನೇ ವಯಸ್ಸಿನಲ್ಲಿ ಜಾನಪಪ ಲೋಕಕ್ಕೆ ಪ್ರವೇಶ ಮಾಡಿದರು. ಬಾಲ್ಯದಿಂದಲೇ ಹಿರಿಯರ ಪಟ ಕುಣಿತ, ಕೋಲಾಟ, ಸೋಮನ ಕುಣಿತ ನೋಡುತ್ತಾ ಬೆಳೆದ ಅವರ ಮನದಲ್ಲಿಯೂ ಕುಣಿತದ ಬೀಜ ಬಿದ್ದು, ಮೊಳಕೆಯೊಡಲು ಆರಂಭಿಸಿತು. ಎಂಟನೇ ತರಗತಿ ವರೆಗೆ ಓದಿದ್ದ ಅವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. 1985ರಲ್ಲಿ ಶಾರದಾ ರೈತ ಯುವಕರ ಸಂಘ ಕಟ್ಟಿಕೊಂಡು 15 ಯುವಕರ ತಂಡದೊಂದಿಗೆ ಜಾನಪದ ಕಲಾಪ್ರಕಾರಗಳ ತರಬೇತಿ ಪಡೆದು
ಕೊಂಡರು.
ಗುಡ್ಡತಿಮ್ಮಯ್ಯ–ಲಕ್ಕಮ್ಮ ದಂಪತಿಗೆ 1958ರ ಮೇ 6ರಂದು ರಂಗಯ್ಯ ಜನಿಸಿದರು. ಅವರು ಕಲಾವಿದ ಮೇಲುಗಿರಿಯಯ್ಯ ಮತ್ತು ಮುತ್ತಯ್ಯ ಮಾರ್ಗದರ್ಶನದಲ್ಲಿ ಕಲೆ ಕಲಿತರು.
ಇಲ್ಲಿಂದ ಆರಂಭವಾಯಿತು. ಇವರ ಜಾನಪದ ಪಯಣ. ಹಳ್ಳಿ, ಹೋಬಳಿ ಮತ್ತು ತಾಲ್ಲೂಕು ಜಾತ್ರೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಇವರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ತಮ್ಮ ಜಾನಪದ ಪ್ರತಿಭೆ ಪ್ರದರ್ಶಿದ್ದಾರೆ. ಅಲ್ಲದೆ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
1985ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಮಂಡಳಿ ಕಾರ್ಯಕ್ರಮ, 1986ರಲ್ಲಿ ಮಾಗಡಿ ತಾಲ್ಲೂಕು ಮಟ್ಟದ ಯುವಜನ ಮೇಳದ ಸಾಂಸ್ಕೃತಿಕ ಕಾರ್ಯಕ್ರಮ, ಮೈಸೂರು ದಸರಾ ಮಹೋತ್ಸವ-1999, ಬೆಂಗಳೂರು ವಿಭಾಗ ಮಟ್ಟದ ಯುವಜನ ಮೇಳ-1989, ಜಿಲ್ಲಾ ಜಾನಪದ ಕಲಾ ಮೇಳ ಬೆಂಗಳೂರು-1996, 4ನೇ ರಾಷ್ಟ್ರೀಯ ಕ್ರೀಡಾಕೂಟ ಬೆಂಗಳೂರು-1997, ಅಖಿಲ ಭಾರತ 69ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮಹಾರಾಷ್ಟ್ರದ ಜಾನಪದ ಸಂಸ್ಕೃತಿ ಉತ್ಸವ, ಕನ್ನಡ ಕಲಾ-ಸಾಹಿತ್ಯ-ಸಂಸ್ಕೃತಿ ಉತ್ಸವ, ಕಲಾ ಮಹೋತ್ಸವ, ಜಾನಪದ ಸಂಸ್ಕೃತಿ ಸಂಭ್ರಮ, ಸಾಂಸ್ಕೃತಿಕ ಕಲಾ ಮೇಳ, ಬೀದರ್‌ನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ, ಗ್ರಾಮೀಣ ಸಾಂಸ್ಕೃತಿಕ ಉತ್ಸವ, ಯಾದಗರಿಯಲ್ಲಿ ನಡೆದ ಸುಗ್ಗಿ-ಹುಗ್ಗ, ಬೆಂಗಳೂರಿನ ಜಾನಪದ ಜಾತ್ರೆ, ಚಿಕ್ಕಬಳ್ಳಾಪುರದ ಜನಪರ ಉತ್ಸವ, ಗದಗದ ಜಾನಪದ ಜಾತ್ರೆ, ಸಾಂಸ್ಕೃತಿಕ ಉತ್ಸವ ಸೇರಿದಂತೆ ನೂರಾರು ವೇದಿಕೆಗಳ ಮೂಲಕ ತಮ್ಮ ಜಾನಪದ ಸೊಬಗನ್ನು ಜನತೆ ಉಣ ಬಡಿಸಿದ್ದಾರೆ.
ಕೋಲಾಟಕ್ಕೆ ತಲೆದೂಗದವರಿಲ್ಲ
ಕೋಲಾಟದ ಕಲಾವಿದ ರಂಗಯ್ಯ ಕಾಲಿಗೆ ಗೆಜ್ಜೆ ಕಟ್ಟಿ ಕೈಗಳಲ್ಲಿ ಕೋಲು ಹಿಡಿದು ಊರೂರು ಸುತ್ತಿ ಕೋಲಾಟದ ವಿವಿಧ ವರಸೆ ಪ್ರರ್ದಶನಕ್ಕೆ ತಲೆದೂಗದವರಿಲ್ಲ. ಸುಶ್ರಾವ್ಯವಾಗಿ ಕೋಲಾಟದ ಪದ ಹಾಡುವ ಇವರು ಶ್ರೀಗಜಾನನ ಜಾನಪದ ಕನ್ನಡ ಕಲಾ ಸಂಘ ಕಟ್ಟಿಕೊಂಡು ಕಲಾವಿದರೊಂದಿಗೆ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಹಾಗೂ ಸರ್ಕಾರಿ ಪ್ರಾಯೋಜಕತ್ವ ಮತ್ತು ಸರ್ಕಾರದ ಸಾವಿರಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಸಂಘದ ಅಧ್ಯಕ್ಷರಾಗಿ ಜನಪದ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜೊತೆಗೆ ಶಾಲಾ ಕಾಲೇಜು ವಿದ್ಯಾಥಿಗಳಿಗೂ ತರಬೇತಿ ನೀಡುತ್ತಿದ್ದಾರೆ.
ನಮ್ಮ ಹಿರಿಯರು ನಡೆಸಿಕೊಡುತ್ತಿದ್ದ ಕಾರ್ಯಕ್ರಮವನ್ನು ನೋಡುತ್ತಿದ್ದೆವು. ಅವರ ಪ್ರೇರಣೆಯಿಂದ ನಾವೂ ಪಟದ ಕುಣಿತ ಕಲಿತು ಸಾಕಷ್ಟು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದೇವೆ.ರಂಗಯ್ಯ, ಕಲಾವಿದ
ಕೋಲಾಟಕ್ಕೆ ತಲೆದೂಗದವರಿಲ್ಲ
ಕೋಲಾಟದ ಕಲಾವಿದ ರಂಗಯ್ಯ ಕಾಲಿಗೆ ಗೆಜ್ಜೆ ಕಟ್ಟಿ ಕೈಗಳಲ್ಲಿ ಕೋಲು ಹಿಡಿದು ಊರೂರು ಸುತ್ತಿ ಕೋಲಾಟದ ವಿವಿಧ ವರಸೆ ಪ್ರರ್ದಶನಕ್ಕೆ ತಲೆದೂಗದವರಿಲ್ಲ. ಸುಶ್ರಾವ್ಯವಾಗಿ ಕೋಲಾಟದ ಪದ ಹಾಡುವ ಇವರು ಶ್ರೀಗಜಾನನ ಜಾನಪದ ಕನ್ನಡ ಕಲಾ ಸಂಘ ಕಟ್ಟಿಕೊಂಡು ಕಲಾವಿದರೊಂದಿಗೆ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಹಾಗೂ ಸರ್ಕಾರಿ ಪ್ರಾಯೋಜಕತ್ವ ಮತ್ತು ಸರ್ಕಾರದ ಸಾವಿರಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಸಂಘದ ಅಧ್ಯಕ್ಷರಾಗಿ ಜನಪದ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜೊತೆಗೆ ಶಾಲಾ ಕಾಲೇಜು ವಿದ್ಯಾಥಿಗಳಿಗೂ ತರಬೇತಿ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.