ADVERTISEMENT

ಕುದೂರು: ಭಗತ್ ಸಿಂಗ್ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 7:04 IST
Last Updated 29 ಸೆಪ್ಟೆಂಬರ್ 2023, 7:04 IST
ಕುದೂರು ಪಟ್ಟಣದ ಭಗತ್ ಸಿಂಗ್ ಅಕಾಡೆಮಿ ಆಫ್ ಕರಾಟೆ ಶಾಲೆಯ ವತಿಯಿಂದ ದೇಶಪ್ರೇಮಿ ಭಗತ್ ಸಿಂಗ್ ರವರ 116 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕುದೂರು ಪಟ್ಟಣದ ಭಗತ್ ಸಿಂಗ್ ಅಕಾಡೆಮಿ ಆಫ್ ಕರಾಟೆ ಶಾಲೆಯ ವತಿಯಿಂದ ದೇಶಪ್ರೇಮಿ ಭಗತ್ ಸಿಂಗ್ ರವರ 116 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.   

ಕುದೂರು: ವಿದ್ಯಾರ್ಥಿಗಳು ಕ್ರಾಂತಿಕಾರಿ ಭಗತ್ ಸಿಂಗ್ ಅವರ ಬಗ್ಗೆ ಅಧ್ಯಯನ ಮಾಡಿ ಅವರ ತತ್ವಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಟ್ಟಣದ ಭಗತ್ ಸಿಂಗ್ ಅಕಾಡೆಮಿ ಆಫ್ ಕರಾಟೆ ಶಾಲೆಯ ಪ್ರಾಂಶುಪಾಲ ಜಿ. ರಮೇಶ್ ತಿಳಿಸಿದರು.

ಕ್ರಾಂತಿಕಾರಿ ಭಗತ್ ಸಿಂಗ್ ಅವರ 116ನೇ ಜನ್ಮ ದಿನಾಚರಣೆಯ ಅಂಗವಾಗಿ ಪಟ್ಟಣದ ಕೆಪಿಎಸ್ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ಇಂದು ಕ್ರಾಂತಿಕಾರಿ ವಿಚಾರಗಳಿಂದ ದೂರವಾಗುತ್ತಿದ್ದಾರೆ. ಭಗತ್ ಸಿಂಗ್ ಕಂಡಂತಹ ಕನಸು ನನಸಾಗದೆ ಉಳಿದಿದೆ. ಭಗತ್ ಸಿಂಗ್, ರಾಜಗುರು, ಸುಖ್‌ದೇವ್ ಮೂವರು ಕೂಡ ಕೇವಲ 24 ವರ್ಷಗಳಿಗೆ ಗಲ್ಲಿಗೇರಿದವರು ಎಂದು ಸ್ಮರಿಸಿದರು.

ಕರಾಟೆ ಶಿಕ್ಷಕರಾದ ಪುರುಷೋತ್ತಮ್, ಚಂದ್ರಶೇಖರ್, ಚೇತನ್, ಗಗನ್, ಚಂದನ್, ಜಯಸೂರ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.