ADVERTISEMENT

ಕನಕಪುರ | ಬಿಪಿಎಲ್ ಕಾರ್ಡ್ ರದ್ದು: ಅಳಲನ್ನು ತೋಡಿಕೊಂಡ ವಯೋವೃದ್ಧ ವಿಧವಾ ಮಹಿಳೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 5:08 IST
Last Updated 30 ಆಗಸ್ಟ್ 2024, 5:08 IST
ಪಾರ್ವತಮ್ಮ
ಪಾರ್ವತಮ್ಮ   

ಕನಕಪುರ: ಸರ್ಕಾರದ ಹೊಸ ನಿಯಮದಡಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದರಿಂದ ತಮ್ಮ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತಿದೆ ಎಂದು ವಯೋವೃದ್ಧ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ಹೊಸ ಕಬ್ಬಾಳು ಗ್ರಾಮದ ವಯೋವೃದ್ಧ ವಿಧವೆ ಪಾರ್ವತಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದಕ್ಕೆ ಸಂಕಷ್ಟ ಎದುರಿಸುತ್ತಿರುವ ಮಹಿಳೆ.

ಪಾರ್ವತಮ್ಮ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ವಿಧವಾ ವೇತನ ಪಡೆಯುತ್ತಿದ್ದರು, ಆದರೆ ಒಂದು ವರ್ಷದ ಹಿಂದೆ ವಿಧವಾ ವೇತನ ನಿಂತು ಹೋಗಿದೆ, ಸಂಬಂಧ ಪಟ್ಟವರ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. 

ADVERTISEMENT

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳ ಮೂಲಕ ಗೃಹಲಕ್ಷ್ಮಿ ಹಣ, ಆಹಾರ ಪಡಿತರ ಕೊಡುತ್ತಿರುವುದರಿಂದ ಜೀವನ ನಿರ್ವಹಣೆ ಸಹಾಯವಾಗಿತ್ತು. ಅದರೆ, ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವಂತೆ ಹೊಸ ಕಾನೂನು ತಂದಿರುವುದರಿಂದ ತಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇಷ್ಟು ದಿನ ಗೃಹಲಕ್ಷ್ಮಿ ಹಣ ಮತ್ತು 5 ಕೆ.ಜಿ ಅಕ್ಕಿ, 5 ಕೆ.ಜಿ ಗೆ ಹಣ ಬರುತ್ತಿತ್ತು. ಇದರಿಂದ ಜೀವನ ನಿರ್ವಹಣೆ ಆಗುತ್ತಿತ್ತು. ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದರಿಂದ ಈಗ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಜೀವನ ನಿರ್ವಣೆಗೆ ತುಂಬಾ ಕಷ್ಟವಾಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕೂಡಲೇ ಸರ್ಕಾರವು ತಮಗೆ ಬಿಪಿಎಲ್ ಕಾರ್ಡನ್ನು ಕೊಡುವ ಮೂಲಕ ತಮ್ಮ ಸಹಾಯಕ್ಕೆ ಬರಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.