ADVERTISEMENT

ಬುದ್ಧನ ಪಂಚಮ ತತ್ವ ಪಾಲಿಸಿ: ಡಾ.ಬಿ.ಸಿ.ಬೊಮ್ಮಯ್ಯ

ಪಾಲಿಸಿ

​ಪ್ರಜಾವಾಣಿ ವಾರ್ತೆ
Published 22 ಮೇ 2024, 5:15 IST
Last Updated 22 ಮೇ 2024, 5:15 IST
ಕನಕಪುರ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುದ್ಧ ಜಯಂತಿಯಲ್ಲಿ ಡಾ.ಬಿ.ಸಿ.ಬೊಮ್ಮಯ್ಯ ಪುಷ್ಪನಮನ ಸಲ್ಲಿಸಿದರು
ಕನಕಪುರ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುದ್ಧ ಜಯಂತಿಯಲ್ಲಿ ಡಾ.ಬಿ.ಸಿ.ಬೊಮ್ಮಯ್ಯ ಪುಷ್ಪನಮನ ಸಲ್ಲಿಸಿದರು   

ಕನಕಪುರ: ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುದ್ಧ ಜಯಂತಿ ಅಂಗವಾಗಿ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಮತ್ತು ಅಮ್ಮ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಅಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಸಿ.ಬೊಮ್ಮಯ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬುದ್ಧರ ಪಂಚಮ ತತ್ವ ಪಾಲನೆ ಮಾಡಿದರೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಮಾತನಾಡಿ, ವಿಶ್ವದ ಮುಂದುವರಿದ ರಾಷ್ಟ್ರಗಳು ಬುದ್ಧನ ತತ್ವ ಆದರ್ಶ ಪಾಲನೆ ಮಾಡುತ್ತಿವೆ ಎಂದು ತಿಳಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ, ಅಮ್ಮ ಚಾರಿಟಬಲ್‌ನ ಸುಮಿತ್ರ ಬೊಮ್ಮಯ್ಯ, ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳಾದ ಬಸವರಾಜು, ಶಿವಮಾದು, ಮರಿಸ್ವಾಮಿ, ಉಮೇಶ್, ಪಶುಪಾಲನ ಇಲಾಖೆ ನಿವೃತ್ತ ಅಧಿಕಾರಿ ಶ್ರೀಕಂಠಯ್ಯ, ಪಂಚಾಯಿತಿ ಕರ ವಸೂಲಿಗಾರ ಮುತ್ತೇಶ್‌ ಇದ್ದರು.

ಕನಕಪುರ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಡಾ.ಬಿ.ಸಿ.ಬೊಮ್ಮಯ್ಯ ಡಾ.ಅದಿತಿ ಡಾ.ಸುಪ್ರಿಯಾ ತಪಾಸಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.