ADVERTISEMENT

ಕನಕಪುರ | ಮದುವೆಗೆ ಹೊರಟಿದ್ದ ಬಸ್ ಪಲ್ಟಿ: 25 ಮಂದಿಗೆ ಗಾಯ

ಸಂಗಮ ಬಳಿ ಎರಡನೇ ತಿರುವಿನ ಕಾರಚ್ಚಲು ದಿಬ್ಬದ ಬಳಿ ಅವಘಡ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:41 IST
Last Updated 21 ಅಕ್ಟೋಬರ್ 2024, 14:41 IST
ಬಸ್ ಪಲ್ಟಿಯಾಗಿ ಬಿದ್ದಿರುವುದು
ಬಸ್ ಪಲ್ಟಿಯಾಗಿ ಬಿದ್ದಿರುವುದು   

ಕನಕಪುರ: ಮದುವೆಗೆ ಹೊರಟ್ಟಿದ ಬಸ್ ಪಲ್ಟಿ ಹೊಡೆದು 25ಕ್ಕೂ ಹೆಚ್ಚಿನ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಭಾನುವಾರ ಸಂಗಮ ಬಳಿ ನಡೆದಿದೆ.

ಸಂಗಮ ಬಳಿ ಎರಡನೇ ತಿರುವಿನ ಕಾರಚ್ಚಲು ದಿಬ್ಬದ ಮುಂಭಾಗದಲ್ಲಿ ಬಸ್‌ ತಿರುವು ಪಡೆಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ.

ಅಪಘಾತದಲ್ಲಿ ತಗಡೆಗೌಡನದೊಡ್ಡಿ ಗ್ರಾಮದ 25 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಶಿವಿರಮ್ಮ, ಅಶೋಕಮ್ಮ, ಕಮಲಮ್ಮ, ರತ್ನಮ್ಮ, ಸ್ವಾಮಣ್ಣ, ಮಾದಶೆಟ್ಟಿ, ಶಿವಣ್ಣ, ಕುಮಾರ್, ಪುಷ್ಪ, ಬಿಂದುಶ್ರೀ ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಕೈ, ಕಾಲು, ಸೊಂಟ, ಬೆನ್ನು ಮೂಳೆ ಮುರಿದಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ಗಾಯಾಳುಗಳನ್ನು ದೊಡ್ಡಆಲಳ್ಳಿ, ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ದಯಾನಂದ ಸಾಗರ್, ಬೆಂಗಳೂರಿನ ಸೇಂಟ್‌ ಜಾನ್ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.