ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ಸ್ಪರ್ಧೆಗೆ ಸಲ್ಲಿಕೆಯಾಗಿದ್ದ 62 ನಾಮಪತ್ರಗಳ ಪರಿಶೀಲನೆ ಚುನಾವಣಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದಿದ್ದು, 38 ನಾಮಪತ್ರಗಳು ಕ್ರಮಬದ್ಧವಾಗಿವೆ.
ಜೆಡಿಎಸ್‌ನ ನಿಖಿಲ್ ಕೆ, ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್, ಉತ್ತಮ ಪ್ರಜಾಕೀಯ ಪಕ್ಷದ ಅಭಿಷೇಕ ಎಸ್, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿಯ ಉಮಾ ವಿ, ರೈತ ಭಾರತ ಪಾರ್ಟಿಯ ನಾಗೇಶ್ ಕೆ.ಜೆ, ಎಸ್‌ಡಿಪಿಐನ ಮೊಹಮ್ಮದ್ ಫಾಜಿಲ್, ಪೂರ್ವಚಲ್ ಮಹಾ ಪಂಚಾಯತ್ ಪಕ್ಷದ ರೇವಣ್ಣ ಎಚ್.ಡಿ, ಯಂಗ್‌ಸ್ಟಾರ್ ಎಂಪವರ್‌ರ್ಮೆಂಟ್ ಪಾರ್ಟಿಯ ಶಾಬಾಜ್‌ಉಲ್ಲಾ ಖಾನ್, ಕರ್ನಾಟಕ ಜನತಾ ಪಕ್ಷದ ಶಿವಕುಮಾರ್ ಎಸ್, ವಿಜಯ ಜನತಾ ಪಾರ್ಟಿಯ ಶ್ರೀಧರ್ ಎನ್.ಎಸ್, ಪಕ್ಷೇತರ ಅಭ್ಯರ್ಥಿಗಳಾದ ಅರವಿಂದ, ಅಶ್ವಥ್ ಪಿ, ಅಂಬರೀಷ್ ಎಸ್, ಇಮ್ಯಾನ್ಯುವೆಲ್, ಕುಮಾರಸ್ವಾಮಿ, ಚನ್ನನಾಗೇಶ್, ಚಂದ್ರೇಗೌಡ ಎಚ್.ಎಸ್, ಜಯಮಾಲಾ, ದಿನೇಶ್ ಬಿ.ಸಿ, ನಿಂಗರಾಜು ಎಸ್, ಪ್ರಕಾಶ್ ಜಿ.ಟಿ, ಪ್ರದೀಪ್ ಟಿ.ವಿ, ಪ್ರದೀಪ್ ಕುಮಾರ್ ಎಂ, ಪ್ರಸನ್ನ ಡಿ, ಬಂಡಿ ರಂಗನಾಥ ವೈ.ಆರ್, ಮಾದೇಗೌಡ ಡಿ.ಎಂ, ಮಂಜುನಾಥ, ಮಂಜುನಾಥಯ್ಯ ಸ್ವಾಮಿ ಸಿ.ಎಂ, ಯೋಗೀಶ್, ರವಿ ಶಿವಪ್ಪ ಪಡಸಲಗಿ, ರಾಜು ಕೆ, ರಾಮಯ್ಯ ಡಿ, ಶ್ರೀಕಾಂತ್ ಕೆ, ಶ್ರೀನಿವಾಸ ಎಸ್.ಎಚ್, ಶ್ರೀನಿವಾಸಮೂರ್ತಿ ಎಚ್.ಕೆ, ಸಯ್ಯದ್ ಜುಲ್ಫಿಕರ್ ಮೆಹದಿ, ಸಯ್ಯದ್ ಆಸಿಫ್ ಬುಕಾರಿ ಹಾಗೂ ಹನುಮಂತಯ್ಯ ಅವರ ನಾಮಪತ್ರ ಕ್ರಮವಾಗಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.