ರಾಮನಗರ: ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ.
ಒಟ್ಟು 20 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಅಂಚೆ ಮತಗಳನ್ನು ಹೊರತುಪಡಿಸಿ, 25,357 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಕಳೆದೆರೆಡು ಚುನಾವಣೆಗಳಲ್ಲಿಯೂ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸತತ ಮೂರನೇ ಭಾರಿಯು ಪರಾಭವಗೊಳ್ಳುವ ಮೂಲಕ ಹ್ಯಾಟ್ರಿಕ್ ಮುಖಭಂಗ ಅನುಭವಿಸಿದ್ದಾರೆ.
ಸತತ ಮೂರನೇ ಸೋಲು ತಪ್ಪಿಸಿಕೊಂಡಿರುವ ಯೋಗೇಶ್ವರ್, ಇದೇ ಮೊದಲ ಬಾರಿಗೆ (1999 ರಿಂದ ಈ ವರೆಗೂ) ಒಂದು ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ.
ಈ ವರೆಗೂ 9 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಸಿಪಿವೈಗೆ ಇದು ಆರನೇ ಗೆಲುವು.
ಚನ್ನಪಟ್ಟಣದಲ್ಲಿ ನಡೆದ 2009 ಹಾಗೂ 2011ರ ವಿಧಾನಸಭಾ ಉಪಚುನಾವಣೆಗಳಲ್ಲಿ ಗೆದ್ದು 2009ರಲ್ಲಿ ಸೋಲು ಕಂಡಿದ್ದ ಸಿಪಿವೈ, 2011ರಲ್ಲಿ ಗೆಲುವು ದಾಖಲಿಸಿದ್ದರು
20ನೇ ಸುತ್ತಿನ ಅಂತ್ಯಕ್ಕೆ ಯೋಗೇಶ್ವರ್ 1,12,388 ಮತ ಪಡೆದಿದ್ದಾರೆ. ಎನ್‌ಡಿಎ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87,031 ಮತಗಳನ್ನು ಗಳಿಸಿದ್ದಾರೆ.
ಯೋಗೇಶ್ವರ್‌ಗೆ ಒಟ್ಟು 25,357 ಮತಗಳ ಅಂತರದ ಗೆಲುವು ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.