ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಶುಕ್ರವಾರ 25 ಅಭ್ಯರ್ಥಿಗಳು ಒಟ್ಟು 28 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಒಟ್ಟು ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಇದರಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (4 ಸೆಟ್ ನಾಮಪತ್ರ) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪ್ರಮುಖರು. ಅ. 28ಕ್ಕೆ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅ. 30 ಕೊನೆಯ ದಿನವಾಗಿದೆ.
ನಾಮಪತ್ರ ಸಲ್ಲಿಸಿದವರು: ಪಕ್ಷೇತರ ಅಭ್ಯರ್ಥಿಗಳಾಗಿ ಅಂದಾನಯ್ಯ, ಬಿ.ಆರ್. ಕೃಷ್ಣೇಗೌಡ, ಸಿ.ಎಂ. ಮಂಜುನಾಥಯ್ಯ ಸ್ವಾಮಿ, ರಾಮಯ್ಯ ಡಿ., ಶ್ರೀನಿವಾಸ ಎಸ್.ಎಚ್, ನಿಂಗರಾಜ್ ಎಸ್., ಜಯಮಾಲ, ಚಿಕ್ಕಯ್ಯ, ಎನ್. ಅಂಬರೀಶ್, ಬಿ.ಸಿ. ದಿನೇಶ್, ಇಮ್ಯಾನ್ಯುಯಲ್, ಡಿ.ಎಂ. ಮಾದೇಗೌಡ, ಸೈಯದ್ ಜುಲ್ಫಿಕರ್ ಮೆಹದಿ, ಮಂಜುನಾಥ್, ಪ್ರಸನ್ನ ಡಿ., ಅಶ್ವಥ್ ಪಿ, ರಾಜು ಕೆ., ಹನುಮಂತಯ್ಯ, ಶ್ರೀಕಾಂತ್ ಕೆ. ಹಾಗೂ ಉತ್ತಮ ಪ್ರಜಾಕೀಯ ಪಾರ್ಟಿಯಥಿ ಅಭೀಷೇಕ್ ಎಸ್., ಭಾರತೀಯ ಜನತಾ ಪಾರ್ಟಿಯ ಬಂಡಿ ರಂಗನಾಥ್ ವೈ.ಆರ್., ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಮೊಹಮ್ಮದ್ ಫಾಜಿಲ್, ರೈತ ಭಾರತ ಪಕ್ಷದ ನಾಗೇಶ್ ಕೆ.ಜೆ., ವಿಜಯ ಜನತಾ ಪಾರ್ಟಿಯ ಶ್ರೀಧರ್ ಎನ್.ಎಸ್. ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ವೆಚ್ಚ ವೀಕ್ಷಕರ ನೇಮಕ: ದೂರು ಸಲ್ಲಿಕೆಗೆ ಅವಕಾಶ
ಚನ್ನಪಟ್ಟಣ (ರಾಮನಗರ): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರನ್ನು ನಿಯೋಜಿಸಿದೆ. ಸಾಮಾನ್ಯ ವೀಕ್ಷಕರನ್ನಾಗಿ ಐಎಎಸ್ ಅಧಿಕಾರಿ ರೀತು ಹಾಗೂ ವೆಚ್ಚ ವೀಕ್ಷಕರನ್ನಾಗಿ ಐಆರ್‌ಎಸ್ ಅಧಿಕಾರಿ ಪ್ರಶಾಂತ್ ಗಡೇಕರ್ ನಿಯೋಜನೆಗೊಂಡಿದ್ದಾರೆ.
ರೀತು ಅವರು ಚನ್ನಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಪರಿವೀಕ್ಷಣಾ ಮಂದಿರದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಉಪ ಚುನಾವಣೆ ಕುರಿತಾದ ದೂರುಗಳಿದ್ದಲ್ಲಿ ಅವರ ಮೊಬೈಲ್ ಸಂಖ್ಯೆ: 8050465792 ಸಂಪರ್ಕಿಸಬಹುದು.
ಪ್ರಶಾಂತ್ ಗಡೇಕರ್ ಅವರು ಸಹ ಪರಿವೀಕ್ಷಣಾ ಮಂದಿರದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಚುನಾವಣೆ ಕುರಿತಾದ ದೂರುಗಳಿದ್ದಲ್ಲಿ ಅವರ ಮೊಬೈಲ್ ಸಂಖ್ಯೆ: 9036440879 ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.