ಚನ್ನಪಟ್ಟಣ (ರಾಮನಗರ): ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರೆಸುತ್ತೇನೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಮೇಲೆ ದೊಡ್ಡ ಮಟ್ಟದ ಅಭಿಮಾನ ಇದೆ. ಪಕ್ಷದ ಕಾರ್ಯಕರ್ತರ ಜೊತೆಗೆ ನಾವು ಸದಾ ಇರುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಶ್ರೀರಾಂಪುರ ಗ್ರಾಮದ ಮಂಜುನಾಥ್ ಅವರನ್ನ ಭೇಟಿ ಮಾಡಿದ ನಂತರ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಚುನಾವಣೆ ಎರಡು ದಿನ ಇರುವಾಗ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಹಾಕ್ತಾರೆ. ಇದನ್ನ ಚುನಾವಣಾ ಆಯೋಗ ಗಮನಿಸಬೇಕು. ಸರ್ಕಾರದ ಹಣ ಕನ್ನಡಿಗರ ತೆರಿಗೆ ಹಣವನ್ನು ಚುನಾವಣೆ ವೇಳೆ ಹಾಕ್ತಾರೆ.ನಾವು ಹೋರಾಟ ಈ ವಿಚಾರದಲ್ಲಿ ಮಾಡಲ್ಲ ಹೋರಾಟ ಮಾಡಲು ಸರ್ಕಾರದ ಸಾಕಷ್ಟುವೈಫಲ್ಯಗಳಿವೆ, ಹಲವು ವಿಚಾರಗಳಿವೆ. ಮುಂದೆ ನಾವು ಹೋರಾಟ ಮಾಡ್ತೇವೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮುಸ್ಲಿಂ ಮತಗಳು ಬಂದಿಲ್ಲ ಎಂಬ ಮಾಧ್ಯಮದವರು ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು , ಈ ಚುನಾವಣೆಯಲ್ಲಿ ಹೆಚ್ಚಿನ ಮತ ಬಂದಿದೆ. ಆದರೆ ಒಂದು ಸಮುದಾಯದ ಮತಗಳು ಬಂದಿಲ್ಲ. ದೇವೇಗೌಡರ ಕೊಡುಗೆಯನ್ನ ನೆನಪಿಸಿಕೊಂಡಿಲ್ಲ. ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅನಿಸುತ್ತೆ. ಹಾಗಾಗಿ ನಾವು ಸಹ ಅವರನ್ನ ಬಿಟ್ಟು ಸ್ಟ್ರಾಟರ್ಜಿ ಮಾಡಬೇಕಾಗುತ್ತೆ ಎಂದರು.
ನಾವು ಕಾಂಗ್ರೆಸ್‌ನವರ ಬಳಿ ಹೋಗಿರಲಿಲ್ಲ. ಅವರೇ ನಮ್ಮ ಬಳಿ ಬಂದರು ಸರ್ಕಾರ ಮಾಡಿದ್ದೆವು.ಆದರೆ ಅವರು ನಮಗೆ ಅನ್ಯಾಯ ಮಾಡಿದ್ದಕ್ಕೆ ನಾವು ಬಿಜೆಪಿಗೆ ಹೋಗಿದ್ದೇವೆ. ನನ್ನ ಸೋಲಿನ ಅಂತರ ನೋಡಿದಾಗ ಆದರ ಹಳವನ್ನು ಯಾರು ಹುಡುಕುತಿಲ್ಲ, ಆ ಸಮುದಾಯದ ವನ್ನು ಬದಿಗಿಟ್ಟು ಮಾತಾಡಿದರೆ. ನಾವು ಸಮಬಲ ಹೋರಾಟ ಮಾಡಿದ್ದೇನೆ ಹಳ್ಳಿಗಳಲ್ಲಿ ನಮ್ಮ ನಿರೀಕ್ಷಿಗೂ ಮೀರಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ನಾನು ಸೋತಿದ್ದೇನೆ ಎಂದು ನಾನು ಮನೆಯಲ್ಲಿ ಕುರುವು ಜಾಯಮಾನ ನಂದಲ್ಲ. ಈ ಹೋರಾಟ ಹೊಸದೇನು ಅಲ್ಲ ನಮ್ಮ ಪಕ್ಷಕ್ಕೆ ನಾನು ಹೋರಾಟದ ಕಿಚ್ಚನ್ನು ನಾನು ರೂಡಿಸಿಕೊಂಡಿದ್ದೇನೆ. ಕಾಂಗ್ರೆಸ್ ನಡವಳಿಕೆ ಸರ್ಕಾರದ ವೈಫಲ್ಯಗಳ ಬಗ್ಗೆ ಜನಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.