ಚನ್ನಪಟ್ಟಣ: ತಾಲ್ಲೂಕಿನ ಮೈಲನಾಯಕನ ಹೊಸಳ್ಳಿ ಬಳಿ ಚನ್ನಪಟ್ಟಣ ಬೇವೂರು ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿದ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಮರದ ಕೊಂಬೆಯನ್ನು ರಸ್ತೆಯಲ್ಲಿಯೇ ಬಿಟ್ಟುಹೋಗಿ, ಕೈಗೊಂಡ ಕಾರ್ಯವೂ ನಿರುಪಯುಕ್ತವಾಗುವಂತೆ ಮಾಡಿದ್ದಾರೆ.
ಭಾನುವಾರ ರಾತ್ರಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು. ಈ ಬಗ್ಗೆ ಪ್ರಜಾವಾಣಿ ಮಂಗಳವಾರದ ಸಂಚಿಕೆಯಲ್ಲಿ ‘ವಿದ್ಯುತ್ ತಂತಿ ಮೇಲೆ ಬಿದ್ದ ಮರದ ಕೊಂಬೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ ಬೆಸ್ಕಾಂ ಸಿಬಂದಿಯ ನೆರವು ಪಡೆದು ವಿದ್ಯುತ್ ಕಡಿತಗೊಳಿಸಿ ಮರದ ಕೊಂಬೆಯನ್ನು ತಂತಿಯ ಮೇಲಿಂದ ಕೆಳಗೆ ಬೀಳಿಸಿದ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಅದನ್ನು ಅರ್ಧಂಬರ್ಧ ತೆರವು ಮಾಡಿ ಉಳಿದ ಕೊಂಬೆಯನ್ನು ರಸ್ತೆಯಲ್ಲೆ ಬಿಟ್ಟು ಹೋಗಿದ್ದಾರೆ.
ಮರದ ಕೊಂಬೆ ರಸ್ತೆಯ ಅರ್ಧ ಭಾಗದಲ್ಲಿ ಬಿದ್ದಿದ್ದು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮೈಲನಾಯಕನಹಳ್ಳಿ ಗ್ರಾಮದ ಅಜಯ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.