ಬಿಡದಿ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಸ ಬೀಸಾಡದಂತೆ ಹಾಗೂ ಸ್ವಚ್ಛತೆ ಕುರಿತು ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಶುಕ್ರವಾರ ಜಾಗೃತಿ ಮೂಡಿಸಲಾಯಿತು.
ಪುರಸಭೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಪ್ರಮುಖ ಕಸದ ಬ್ಲಾಕ್ ಸ್ಪಾಟ್‌ಗಳಾದ ರೈಲ್ವೆ ನಿಲ್ದಾಣ ರಸ್ತೆ , ಪೊಲೀಸ್ ವಸತಿ ನಿಲಯ, ಬಿಜಿಎಸ್ ವೃತ್ತ ಹಾಗೂ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಧರಣಿ ಸಾಂಸ್ಕೃತಿಕ ಕಲಾ ಬಳಗವು ತ್ಯಾಜ್ಯ ವಿಂಗಡಣೆ , ಎಲ್ಲೆಂದರಲ್ಲಿ ಕಸ ಹಾಕದಂತೆ, ಕಸವನ್ನು ಕಸದ ಗಾಡಿಗೆ ಕೊಡುವಂತೆ ಬೀದಿ ನಾಟಕ ಪ್ರದರ್ಶನ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪುರಸಭೆ ಅಧ್ಯಕ್ಷ ಹರಿಪ್ರಸಾದ್ ,ಉಪಾಧ್ಯಕ್ಷೆ ಮಂಜುಳಾ ಗೋವಿಂದಪ್ಪ, ಪುರಸಭೆ ಮುಖ್ಯಾಧಿಕಾರಿ ರಮೇಶ್, ನಮಸ್ಕೃತ , ರೂಪ, ತೇಜಸ್ವಿನಿ , ಪುರಸಭೆ ಸದಸ್ಯ ನವೀನ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.