ADVERTISEMENT

ಚನ್ನಪಟ್ಟಣ: ಅದ್ದೂರಿ ಗಂಧ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:17 IST
Last Updated 28 ಅಕ್ಟೋಬರ್ 2024, 4:17 IST
ಚನ್ನಪಟ್ಟಣದ ಬಡಾಮಕಾನ್‌ನ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ 285ನೇ ಗಂಧ ಮಹೋತ್ಸವ ನಡೆಯಿತು
ಚನ್ನಪಟ್ಟಣದ ಬಡಾಮಕಾನ್‌ನ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ 285ನೇ ಗಂಧ ಮಹೋತ್ಸವ ನಡೆಯಿತು   

ಚನ್ನಪಟ್ಟಣ: ನಗರದ ಬಡಾಮಕಾನ್‌ನ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ 285ನೇ ಗಂಧ ಮಹೋತ್ಸವ ಗುರುವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.

ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಗಂಧ ಮಹೋತ್ಸವದ ಮೊದಲ ದಿನ ಗುರುವಾರ ರಾತ್ರಿ ಅಖಿಲ್ ಷಾ ಖಾದ್ರಿ ದರ್ಗಾದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.  ನಂತರ ಮುಸ್ಲಿಂ ಧರ್ಮಗುರುಗಳು ಗಂಧ ಮಹೋತ್ಸವಕ್ಕೆ ಚಾಲನೆ ನೀಡಿದರು.  ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಗೆ ನಡೆಯಿತು.

ನಗರದ ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡೀ ಮೆರವಣಿಗೆ ನಡೆಯಿತು. ರಸ್ತೆಗಳ ಎರಡು ಬದಿಯ ಇಕ್ಕೆಲಗಳಲ್ಲಿ ಜನ ಗಂಧ ಮಹೋತ್ಸವ ಮೆರವಣಿಗೆ ವೀಕ್ಷಿಸಿದರು. ಮಹೋತ್ಸವಕ್ಕೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕವ್ವಾಲಿ ತಂಡಗಳು ಕವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

ಗಂಧ ಮಹೋತ್ಸವದ ಅಂಗವಾಗಿ ನಗರದಲ್ಲಿ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಿಗೆ ಮಾಡಿರುವ ವಿದ್ಯುತ್ ದೀಪಾಲಂಕಾರವು ಗಮನ ಸೆಳೆಯಿತು. ನಂತರದ ನಾಲ್ಕು ದಿನಗಳ ಕಾಲವು ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗಳು, ಮೆರವಣಿಗೆ ನಡೆಯಿತು.

ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ 300 ವರ್ಷಗಳ ಹಿಂದೆ ವಿಜಯಪುರ ಮಾರ್ಗವಾಗಿ ಕರ್ನಾಟಕಕ್ಕೆ ಬಂದು ರಾಮನಗರ ತಾಲ್ಲೂಕಿನ ಜಾಲಮಂಗಲ ಬೆಟ್ಟದಲ್ಲಿ ಸುಮಾರು ಏಳು ವರ್ಷಗಳ ಕಾಲ ನೆಲೆಗೊಂಡಿದ್ದರು. ಆನಂತರ ಚನ್ನಪಟ್ಟಣದಲ್ಲಿ ಕೆಲವು ತಿಂಗಳಗಳ ಕಾಲ ವಾಸವಾಗಿದ್ದರು. ಇವರ ಮರಣ ನಂತರ ಟಿಪ್ಪುಸುಲ್ತಾನ್ ನೂತನ ದರ್ಗಾ ನಿರ್ಮಿಸಿದರು. ಈ ದರ್ಗಾ ಚನ್ನಪಟ್ಟಣದ ಬಡಾಮಕಾನ್ ನಲ್ಲಿದ್ದು, 284 ವರ್ಷಗಳಿಂದಲೂ ಇಲ್ಲಿ ಪ್ರತಿ ವರ್ಷ ಗಂಧಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.