ADVERTISEMENT

ರಾಮನಗರ ತಾಲ್ಲೂಕಿನ ಲಕ್ಕೋಜನಹಳ್ಳಿಯಲ್ಲಿ ಚಿರತೆ ದಾಳಿಗೆ 9 ಮೇಕೆಗಳು ಬಲಿ

​ಪ್ರಜಾವಾಣಿ ವಾರ್ತೆ
Published 4 ಮೇ 2019, 11:04 IST
Last Updated 4 ಮೇ 2019, 11:04 IST
ಲಕ್ಕೋಜನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾಗಿರುವ ಸಿದ್ದಪ್ಪ ಎಂಬುವರ ಮೇಕೆಗಳು
ಲಕ್ಕೋಜನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾಗಿರುವ ಸಿದ್ದಪ್ಪ ಎಂಬುವರ ಮೇಕೆಗಳು   

ರಾಮನಗರ: ತಾಲ್ಲೂಕಿನ ಲಕ್ಕೋಜನಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವರ ಒಂಭತ್ತು ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ.

ಮನೆಯ ಬಳಿಯ ಶೆಡ್ ನಲ್ಲಿದ್ದ ಮೇಕೆಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿರುವ ಚಿರತೆಗಳು ಆರು ಮೇಕೆ ಕತ್ತನ್ನು ಕಚ್ಚಿ ರಕ್ತಹೀರಿ ಸಾಯಿಸಿ ಮೂರು ಮೇಕೆಗಳನ್ನು ಎಳೆದೊಯ್ದಿವೆ.

ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗುವ ಚಿರತೆಗಳು ದನದ ಕೊಟ್ಟಿಗೆ, ಮನೆಯ ಆವರಣ, ಮನೆಯ ಕಾಂಪೌಂಡ್ ಒಳಗೆ ಇರುವ ಕೋಳಿ, ಕುರಿ, ಮೇಕೆ, ಹಸು, ಎಮ್ಮೆ ಕರು ಸೇರಿದಂತೆ ಸಾಕು ಪ್ರಾಣಿಗಳನ್ನು ಎಳೆದೊಯ್ದು ತಿಂದು ಹಾಕುತ್ತಿವೆ. ಇದರಿಂದ ರೈತರು ಆರ್ಥಿಕ ನಷ್ಟ ಹೊಂದುವಂತಾಗಿದೆ. ಚಿರತೆ ಸೆರೆ ಹಿಡಿದು ಅಗತ್ಯ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

ಚಿರತೆ ದಾಳಿ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿದರು. ರೈತರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದು ಇಲಾಖೆಯಿಂದ ದೊರೆಯುವ ಪರಿಹಾರದ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.