ಕನಕಪುರ: ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ತೆಂಗಿನ ಮರಗಳಿಗೆ ನುಸಿ ಮತ್ತು ಗರಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಈ ರೋಗ ಒಮ್ಮೆ ಒಂದು ತೋಟಕ್ಕೆ ಬಂದರೆ ಇಡೀ ಪ್ರದೇಶದಲ್ಲಿನ ತೆಂಗಿನ ಮರಗಳಿಗೆ ಹರಡಿ ತೋಟವೇ ನಾಶವಾಗುತ್ತದೆ.
ನುಸಿ ಮತ್ತು ಗರಿ ರೋಗದ ಕೀಟಗಾಳಿಯಲ್ಲಿ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತವೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಆ ಮರದ ಪೂರ್ಣ ಗರಿಗಳು ನಾಶವಾಗಿ ತೋಟದಲ್ಲಿನ ಎಲ್ಲ ಮರಗಳು ರೋಗದಿಂದ ಬಾಧಿಸಿ ಒಣಗಿ ಹೋಗುತ್ತವೆ.
ನಲ್ಲಹಳ್ಳಿ ಗ್ರಾಮದ ಎಲ್ಲ ರೈತರ ತೋಟಗಳು ಇದೇ ರೀತಿ ಆಗಿದ್ದು ಈಗ ಮರಗಳು ನುಸಿ ಮತ್ತು ಗರಿ ರೋಗದಿಂದ ಒಣಗಲು ಪ್ರಾರಂಬಿಸಿವೆ.
ತೋಟಗಾರಿಕೆ ಇಲಾಖೆ ಸೇರಿದಂತೆ ತಾಲ್ಲೂಕು ಆಡಳಿತ ಈ ಕಡೆ ಗಮನಹರಿಸಿ ನುಸಿ ಮತ್ತು ಗರಿ ರೋಗಸಂಪೂರ್ಣವಾಗಿ ನಾಶಪಡಿಸಿ ರೈತರ ನೆರವಿಗೆ ಬರಬೇಕೆಂದು ನಲ್ಲಹಳ್ಳಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.