ADVERTISEMENT

ಬೈರಮಂಗಲದ ವೃಷಭಾವತಿ ಕೆರೆಗೆ ಬೆಂಗಳೂರಿನ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 12:40 IST
Last Updated 1 ಜೂನ್ 2020, 12:40 IST

ಬಿಡದಿ: ಇತ್ತೀಚಿಗೆ ಬಿದ್ದ ಭಾರಿ ಮಳೆಗೆ ಬೈರಮಂಗಲದ ವೃಷಭಾವತಿ ಕೆರೆಗೆ ಹೆಚ್ಚು ನೀರು ಹರಿದು ಬಂದಿದ್ದು, ಇದರಲ್ಲಿ ಬೆಂಗಳೂರಿನ ಕಲುಷಿತ ನೀರು ಸೇರಿದೆ.

ನೀರು ಸಂಸ್ಕರಣೆ ಉದ್ದೇಶದಿಂದ ಕೆರೆಯ ಎರಡೂ ಬದಿಯ ನಾಲೆಗಳನ್ನು ಆಧುನೀಕರಣಗೊಳಿಸುವ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಾಮಗಾರಿ ಕುಂಠಿತಗೊಂಡಿದೆ. ಕಲುಷಿತಗೊಂಡ ನೀರು ಸಂಸ್ಕರಣಗೊಂಡ ನಂತರ ವ್ಯವಸಾಯ ಮಾಡಲು ಇಲ್ಲಿನ ಕೃಷಿಕರು ಆಸಕ್ತಿ ಹೊಂದಿದ್ದರು. ಆದರೆ, ವಾಡಿಕೆಗಿಂತ ಮೊದಲೆ ಹೆಚ್ಚು ಮಳೆ ಬಿದ್ದು ಕೆರೆ ತುಂಬುವ ಹಂತಕ್ಕೆ ಬಂದಿದೆ. ಅನಿವಾರ್ಯವಾಗಿ ಕಾಲುವೆಗಳಿಗೆ ಕಲುಷಿತ ನೀರು ಹರಿಸಬೇಕಾದ ಸ್ಥಿತಿ ಇದೆ.

ಸ್ಥಳೀಯ ರೈತ ಪುಟ್ಟಸ್ವಾಮಿ ಮಾತನಾಡಿ, ಈ ಕೆರೆ ಸುಮಾರು ವರ್ಷದಿಂದಲೂ ವ್ಯವಸಾಯಕ್ಕೆ ಯೋಗ್ಯವಲ್ಲದ ನೀರನ್ನು ಉಪಯೋಗಿಸಿ ಹಲವಾರು ರೋಗರುಜಿನಗಳಿಗೆ ಒಳಗಾಗಿದ್ದೇವೆ. ಈ ಬಾರಿಯಾದರೂ ಸಂಸ್ಕರಿಸಿದ ನೀರಿನಿಂದ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.