ADVERTISEMENT

ಜಾಲಮಂಗಳ ಕೃಷಿ ಸಹಕಾರ ಸಂಘ: ಉಮಾ ಚಂದ್ರಯ್ಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 7:56 IST
Last Updated 7 ಫೆಬ್ರುವರಿ 2024, 7:56 IST
ರಾಮನಗರ ತಾಲ್ಲೂಕಿನ ಜಾಲಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಉಮಾ ಚಂದ್ರಯ್ಯ ಹಾಗೂ ಉಪಾಧ್ಯಕ್ಷ ಜೆ.ಸಿ. ರಾಜು ಅವರನ್ನು ಸಂಘದ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರು ಸನ್ಮಾನಿಸಿದರು
ರಾಮನಗರ ತಾಲ್ಲೂಕಿನ ಜಾಲಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಉಮಾ ಚಂದ್ರಯ್ಯ ಹಾಗೂ ಉಪಾಧ್ಯಕ್ಷ ಜೆ.ಸಿ. ರಾಜು ಅವರನ್ನು ಸಂಘದ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರು ಸನ್ಮಾನಿಸಿದರು   

ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿಯ ಜಾಲಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಶಿವರಾಜು ಮತ್ತು ಉಪಾಧ್ಯಕ್ಷ ಕೃಷ್ಣಪ್ಪ ಅವರಿಂದ ತೆರವಾಗಿದ್ದ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಉಮಾ ಚಂದ್ರಯ್ಯ ಹಾಗೂ ಉಪಾಧ್ಯಕ್ಷರಾಗಿ ಜೆ.ಸಿ. ರಾಜು ಅವಿರೋಧವಾಗಿ ಆಯ್ಕೆಯಾದ್ದಾರೆ.

ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಉಮಾ ಚಂದ್ರಯ್ಯ ಮತ್ತು ಜೆ.ಸಿ.ರಾಜು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ, ಚುನಾವಣಾಧಿಕಾರಿ ರಾಮನಗರ ಉಪ ವಿಭಾಗ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಮಂಜುನಾಥ್ ಅವರು, ನಾಮಪತ್ರ ಸಲ್ಲಿಸಿದ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

‘ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಸಂಘದ ನಿರ್ದೇಶಕರು ಗ್ರಾಮದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವೆ. ಎಲ್ಲರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರಮಿಸುವೆ’ ಎಂದು ಸಂಘದ ನೂತನ ಅಧ್ಯಕ್ಷೆ ಉಮಾ ಚಂದ್ರಯ್ಯ ಹೇಳಿದರು.

ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು, ಸಂಘದ ಸಿಇಒ ಚಂದ್ರು, ಸಂಘದ ನಿರ್ದೇಶಕರಾದ ಕೃಷ್ಣಪ್ಪ, ಮಹದೇವಸ್ವಾಮಿ, ಬೋರಲಿಂಗಯ್ಯ, ವೆಂಕಟೇಗೌಡ, ಸಾವಿತ್ರಮ್ಮ, ರಾಮಕೃಷ್ಣಯ್ಯ, ಮಾಜಿ ಅಧ್ಯಕ್ಷ ಪುಟ್ಟಮಾರೇಗೌಡ, ಮುಖಂಡರಾದ ಚಂದ್ರಪ್ಪ, ತಮ್ಮಯ್ಯಣ್ಣ, ನಾರಾಯಣಪ್ಪ, ಜೆ.ವಿ.ಶ್ರೀನಿವಾಸ್, ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ರವಿ ಸನ್ಮಾನಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.